ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮದಿನಾಚರಣೆ ಪ್ರಯುಕ್ತ ರಿಲಯನ್ಸ್ ಫೌಂಡೇಷನ್ 50,000 ಸ್ಕಾಲರ್‌ಶಿಪ್‌ಗಳನ್ನು ಪ್ರಕಟಿಸಿದೆ. ರಿಲಯನ್ಸ್ ಸಮೂಹದ ದಾನ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ರಿಲಯನ್ಸ್ ಫೌಂಡೇಷನ್, ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್‌ಶಿಪ್‌ಗಳನ್ನು ಘೋಷಿಸಲಿದೆ. 2022-23ರಲ್ಲಿ 5,000 ಪದವಿ ಪೂರ್ವ ಸ್ಕಾಲರ್‌ಶಿಪ್‌ಗಳನ್ನು ನೀಡಲಿದೆ. ಇದು 2 ಲಕ್ಷ ರೂ. ತನಕ ಸಿಗಲಿದೆ. 2023ರ ಫೆಬ್ರವರಿ 14ರ ತನಕ ಅರ್ಜಿ ಸಲ್ಲಿಸಬಹುದು ಎಂದು ಫೌಂಡೇಷನ್ ತಿಳಿಸಿದೆ.
ನವದೆಹಲಿ: ಪಂಜಾಬ್ ಸರ್ಕಾರವು ₹2,000 ಕೋಟಿಯಷ್ಟು ವಿದ್ಯಾರ್ಥಿವೇತನ ಪಾವತಿಸದ ಕಾರಣ, ಸುಮಾರು ಎರಡು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಎಂದು ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ ಬುಧವಾರ...
ಪಾಟ್ನಾ: ಬಿಹಾರದ ದಿನಗೂಲಿ ಕಾರ್ಮಿಕನ 17 ವರ್ಷದ ಮಗನಾದ ಪ್ರೇಮ್ ಕುಮಾರ್ ಎಂಬಾತನಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗ ಮಾಡುವ ಅದೃಷ್ಟ ಹಾಗೂ 2.5 ಕೋಟಿ ರೂಪಾಯಿ ಶಿಷ್ಯವೇತನ...
ರಾಂಚಿ: ಜಾರ್ಖಂಡ್ ರಾಜ್ಯ ಸರ್ಕಾರಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ. ಅದರ ಪ್ರಕಾರ ವರ್ಷಕ್ಕೆ 10 ಮಂದಿ...