ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ ಮಧುಮೇಹವೊಂದು ಪ್ರಾಚೀನ ಕಾಯಿಲೆ. ಇದನ್ನು ಗ್ರೀಸ್, ಈಜಿಪ್ತ್ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸ ಲಾಗಿತ್ತು. ‘ಡಯಾಬಿಟಿಸ್ ’ಎಂದರೆ ಸಿಹಿಮೂತ್ರ. ಮೂತ್ರ ಸಿಹಿಯಾಗಿರುವುದರಿಂದ ಈ ಶಬ್ದ ರೋಗದ ಸಂಪೂರ್ಣ ಚಿತ್ರಣ ನೀಡುತ್ತದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ಜನ್ಮದಿನವನ್ನು ಮಕ್ಕಳ ದಿನ ಎಂದು ಆಚರಿಸಲು ಬಯಸಿದ್ದರು. ಅದೇ ದಿನವನ್ನೀಗ ವಿಶ್ವ ಮಧುಮೇಹ ದಿನವೆಂದು ಆಚರಿಸಲಾಗುತ್ತಿರವುದೊಂದು ವಿಪರ್ಯಾಸ. ೧೪ನೇ ನವೆಂಬರ್‌ರಂದು ಮಧುಮೇಹ ನಿಯಂತ್ರಣಕ್ಕೆ ಇನ್ಸುಲಿನ್ ಕಂಡು ಹಿಡಿದ ಸರ್ ಫ್ರೆಡೆರಿಕ್ ಬೆಂಟಿಂಗ್ […]