ನವದೆಹಲಿ: ಪಂಜಾಬ್ ಸರ್ಕಾರವು ₹2,000 ಕೋಟಿಯಷ್ಟು ವಿದ್ಯಾರ್ಥಿವೇತನ ಪಾವತಿಸದ ಕಾರಣ, ಸುಮಾರು ಎರಡು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಎಂದು ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ ಬುಧವಾರ ತಿಳಿಸಿದೆ. ‘ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನದ ಬಾಕಿ ಪಾವತಿಸಿದ್ದರೂ, ಕಾಲೇಜುಗಳಿಗೆ ಏಕೆ ಹಣವನ್ನು ಪಾವತಿಸಿಲ್ಲ ಎಂಬ ಬಗ್ಗೆ ಆಯೋಗವು ರಾಜ್ಯ ಸರ್ಕಾರವನ್ನು ಕೇಳಿದೆ. ನಾವು ಈ ವಿಷಯದಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರವು ತಮ್ಮ ಶುಲ್ಕವನ್ನು ಪಾವತಿಸದ ಕಾರಣ ಕಾಲೇಜುಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ […]