ಡಾ.ಉಮಾಮಹೇಶ್ವರಿ ಎನ್. ಮೊದಲನೇ ಬಾಜಿರಾವ್ ಕಟ್ಟಿಸಿದ ಶನಿವಾರವಾಡ ಕೋಟೆಯು ಮಹಾರಾಷ್ಟ್ರದ ಬಹು ಸುಂದರ ಐತಿಹಾಸಿಕ ಕಟ್ಟಡ ಗಳಲ್ಲಿ ಒಂದು. ಮಹಾರಾಷ್ಟ್ರದ ಪುಣೆ ನಗರ ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದ ನಗರ ಗಳಲ್ಲಿ ಒಂದು. ಈ ನಗರದ ಕೇಂದ್ರ ಭಾಗದಲ್ಲಿರುವ ಶನಿವಾರವಾಡ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಪ್ರಮುಖವಾದದ್ದು. 18ನೆಯ ಶತಮಾನದಲ್ಲಿ ನಿರ್ಮಾಣಗೊಂಡು ಹಲವಾರು ದಶಕಗಳ ಕಾಲ ಪೇಶ್ವೆಯರ ವಾಸಸ್ಥಳ ವಾಗಿತ್ತು. ಮೊದಲನೇ ಬಾಜಿರಾವ್ ಇದರ ಶಂಕುಸ್ಥಾಪನೆ ನೆರವೇರಿಸಿದ್ದು ಶನಿವಾರ, ಜನವರಿ 10, 1730ರಂದು. ಉದ್ಘಾಟನೆ ಆದದ್ದು ಶನಿವಾರ, ಜನವರಿ 22, […]