-ಡಾ.ಪರಮೇಶ್ (ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ) ಶ್ರೀಗಳ ಆರೋಗ್ಯ ಕ್ರಮ ಬಹಳ ಕಟ್ಟುನಿಟ್ಟಿನದು. ಮಿತಾಹಾರ ಶ್ರೀಗಳ ಆರೋಗ್ಯದ ಗುಟ್ಟು. ಶರೀರಕ್ಕೆ ಎಷ್ಟು ಆಹಾರ ಬೇಕು ಅದನ್ನ ಮಾತ್ರ ಸ್ವೀಕರಿಸುತ್ತಿದ್ದರು. ಶರೀರವನ್ನ ಕಾಪಾಡಿಕೊಳ್ಳುವುದಕ್ಕೆ ಮಾತ್ರ ಆಹಾರ ಸ್ವೀಕರಿಸಬೇಕು ಎನ್ನುವುದು ಶ್ರೀಗಳ ಗುರಿಯಾಗಿತ್ತು. ಶ್ರೀಗಳಿಗೆ ದಕ್ಷಿಣ ಭಾರತದ ಆಹಾರವೆಂದರೆ ಬಹಳಷ್ಟು ಪ್ರಿಯವಾಗಿತ್ತು. ಶ್ರೀಗಳಿಗೆ ಕಾಲಕಾಲಕ್ಕೆ ದೊರೆಯುವ ಹಣ್ಣುಗಳನ್ನ ಸ್ವೀಕರಿಸುವುದು ಬಹಳ ಪ್ರಿಯ. ಮಠಕ್ಕೆ ಬರುವ ಭಕ್ತರು ಯಥೇಚ್ಛವಾಗಿ ಕಾಳುಗಳನ್ನ ನೀಡುತ್ತಿದ್ದರು. ಅದರಲ್ಲೇ ಕಾಳುಗಳ ಸಲಾಡ್‌ನ್ನು ಶ್ರೀಗಳು […]