ನವದೆಹಲಿ: ಸಾವಿರಾರು ಅನಾಥ ಮಕ್ಕಳ ಸಾಕುತ್ತಿದ್ದ ಸಿಂಧೂತಾಯಿ( 75 ) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರನ್ನ ಅನಾಥ ಮಕ್ಕಳ ತಾಯಿ ಎಂದೇ ಕರೆಯಲಾಗುತ್ತಿತ್ತು. ಸಾವಿರಾರು ಮಕ್ಕಳನ್ನು ಭಿಕ್ಷೆ ಬೇಡಿ ಸಾಕಿದ್ದರು. ಅದರ ಜೊತೆಗೆ ಆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ದ್ದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿ. 24 ರಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಅವರಿಗೆ ಹೃದಯಾ ಘಾತವೂ ಸಂಭವಿಸಿ, ನಿಧನರಾಗಿದ್ದಾರೆ. ಮಧ್ಯಾಹ್ನವೇ ತೋಸರ್ ಪಾಗಾ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ […]