ಕೊಲಂಬೊ : ಎಕ್ಸ್ ಪ್ರೆಸ್ ವೇಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಮತ್ತು ಅವರ ಭದ್ರತಾ ಅಧಿಕಾರಿ ಸೇರಿ ಮೂವರು ಮೃತಪಟ್ಟಿದ್ದಾರೆ. ನಿಶಾಂತ, ಅವರ ಭದ್ರತಾ ಅಧಿಕಾರಿ ಮತ್ತು ಚಾಲಕ ಇದ್ದ ಜೀಪ್ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು, ರಾಗಮ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಶಾಂತ ಮತ್ತು ಪೊಲೀಸ್ ಕಾನ್ಸ್ಟೇಬಲ್ ಜಯಕೋಡಿ ಆಸ್ಪತ್ರೆಗೆ ದಾಖಲಾದಾಗ […]