ನವದೆಹಲಿ : 2016 ರಲ್ಲಿ ಪ್ರಾರಂಭವಾದಾಗಿನಿಂದ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಭಾರತದಲ್ಲಿ ಡಿಜಿಟಲ್ ಪಾವತಿಗಳ ಜಗತ್ತನ್ನು ಪರಿವರ್ತಿಸಿದೆ. ಯುಪಿಐ ಅಳವಡಿಸಿಕೊಂಡ ಮೊದಲ ಅಪ್ಲಿಕೇಶನುಗಳಲ್ಲಿ ಒಂದಾದ ಜನಪ್ರಿಯ ಮೊಬೈಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ಪೇ ಶ್ರೀಲಂಕಾದಲ್ಲಿ ತನ್ನ ಯುಪಿಐ ಸೇವೆಯನ್ನು ಪ್ರಾರಂಭಿಸಿತು. ಫೋನ್‌ಪೇ ಬಳಕೆದಾರರು ಡಿಜಿಟಲ್ ಪಾವತಿಗಳನ್ನು ಮಾಡಲು ಲಂಕಾಪೇ ಕ್ಯೂಆರ್ ಕೋಡುಗಳನ್ನು ಸ್ಕ್ಯಾನ್ ಮಾಡಬಹುದು. ಇದು ಭಾರತೀಯ ಪ್ರವಾಸಿಗರು ನಗದು ವಹಿವಾಟಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಕರೆನ್ಸಿ ಪರಿವರ್ತನೆಗಳನ್ನು ಲೆಕ್ಕಹಾಕುವ ತೊಂದರೆ ಯನ್ನು ಕಡಿಮೆ ಮಾಡುತ್ತದೆ. […]