Friday, 20th September 2024

#Visakhapatnam

ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಅಗ್ನಿ ಅವಘಡ

ವಿಶಾಖಪಟ್ಟಣಂ: ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಬ್ಲಾಸ್ಟ್ ಫರ್ನೇಸ್ ಪ್ಲಾಂಟ್-2 ರಿಂದ ದ್ರವ ಸೋರಿಕೆಯಾಗಿ ಶನಿವಾರ ಭಾರಿ ಅಗ್ನಿ  ಅವಘಡ ಕಾಣಿಸಿಕೊಂಡಿದೆ. ಎರಡು ಲಾರಿಗಳು ಘಟನೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾ ಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಯಾವುದೇ ಪ್ರಾಣಾ ಪಾಯ ಸಂಭವಿಸಿಲ್ಲ. ಅವಘಡದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎನ್ನಲಾಗಿದೆ. ಅಗ್ನಿ ಅವಘಡದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಮುಂದೆ ಓದಿ