ವಿಶಾಖಪಟ್ಟಣಂ: ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಆರೋಪದ ಮೇಲೆ ಇಬ್ಬರು ಆರೋಪಿ ಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್ಪೋಸ್ಟ್ನಲ್ಲಿ ಬಂಧಿಸಲಾಗಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಅಂತಾರಾಜ್ಯ ದಂಧೆಕೋರರು ಎಂಬುದಾಗಿ ತಿಳಿದುಬಂದಿದೆ. ಛತ್ತೀಸ್ಗದ ರಾಯ್ಪುರದಿಂದ ಆಂಧ್ರದ ವಿಶಾಖ ಪಟ್ಟಣಂ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುಂಕಿ ಔಟ್ಪೋಸ್ಟ್ನಲ್ಲಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದಾಗ 500 ರೂ. ನೋಟಿನ ಕಂತೆಗಳ ಒಟ್ಟು 7.9 ಕೋಟಿ ರೂ. ನಕಲಿ ಹಣ […]