ಅಭಿವ್ಯಕ್ತಿ ಪರಿಣಿತಾ ರವಿ, ಕೊಚ್ಚಿ ಬದುಕೆಂಬುದು ನಿಂತ ನೀರಲ್ಲ. ನಿರಂತರ ಚಲನಶೀಲವಾದ ಪ್ರವಾಹ. ಈ ಜೀವನಪ್ರವಾಹದಲ್ಲಿ ತಂಗಾಳಿಯೋ, ಬಿರುಗಾಳಿ ಯೋ, ಚಂಡಮಾರುತವೋ ಏನೇ ಎದುರಾದರೂ ನಮ್ಮೊಳಗಿನ ಜೀವನೋತ್ಸಾಹದ ಒರತೆ ಬತ್ತದಂತೆ ಕಾಪಾಡಬೇಕು. ನಮ್ಮೊಳಗಿನ ಅಂತಃಶಕ್ತಿಯನ್ನು ಜೀವಂತವಿರಿಸ ಬೇಕಾದವರು ನಾವೇ ಹೊರತು ಬೇರಾರೂ ಅಲ್ಲ. ಸುತ್ತಲೂ ಕಾಲೆಳೆಯುವ ಜನರಿರುವಾಗ, ಚುಚ್ಚುಮಾತುಗಳಿಂದ ಹೃದಯವನ್ನು ತಿವಿಯುವಾಗ, ಬೆನ್ನಹಿಂದೆ ಕುಹಕವಾಡುವ ಮಂದಿಯ ಮಧ್ಯೆ ಸದಾ ಧನಾತ್ಮಕವಾಗಿ ಚಿಂತಿಸುತ್ತಾ ಕ್ರಿಯಾಶೀಲರಾಗಿರುವುದು ದೊಡ್ಡ ಸವಾಲೇ ಸರಿ. ಹಾಗಾದರೆ ಟೀಕೆಗಳನ್ನು, ನಿಂದನೆಗಳನ್ನು ಮೀರಿ ನಿಂತು ಮನಸನ್ನು ಸದಾ […]