ಜುರಿಚ್( ಸ್ವಿಟ್ಜರ್ಲೆಂಡ್): ಯುಬಿಎಸ್ ಎಜಿ ದಿವಾಳಿಯಂಚಿನಲ್ಲಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ತುರ್ತಾಗಿ ಕ್ರೆಡಿಟ್ ಸ್ವೀಸ್ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಸೋಮವಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ವೇಳೆ ಕ್ರೆಡಿಟ್ ಸ್ವೀಸ್ ಬ್ಯಾಂಕ್ನ ಕಾರ್ಯಚಟುವಟಿಕೆ ಮತ್ತು ವ್ಯವಹಾರದಲ್ಲಿ ಗಣನೀಯವಾದ ಬದಲಾವಣೆ ತರಲು ಹೊರಟಿದೆ. ಕ್ರೆಡಿಟ್ ಸ್ವೀಸ್ ಬ್ಯಾಂಕರ್ಗಳ (ಸಿಬ್ಬಂದಿ) ಮೇಲೆ ಬಿಗಿ ನಿರ್ಬಂಧಗಳನ್ನು ಹಾಕಲು ನಿರ್ಧರಿಸ ಲಾಗಿದೆ. ಹೈ ರಿಸ್ಕ್ ಎಂದು ಪರಿಗಣಿಸಲಾದ ದೇಶಗಳಿಂದ ಹೊಸ ಗ್ರಾಹಕ ರನ್ನು ತರದಂತೆ ನಿಷೇಧ ಕೂಡ ಹೇರಲು ಯುಬಿಎಸ್ ಯೋಜಿಸಿದೆ. […]
ಸ್ವಿಜರ್‌ಲ್ಯಾಂಡ್: ಯಾವುದೇ ಬಾಧೆ ಪಡದೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ. ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ‘ಸ್ಯಾಕ್ರೋ’...