Thursday, 19th September 2024

ನಟಿ ದಿವ್ಯಾ ಭಟ್ನಾಗರ್‌ ಕೊರೊನಾ‌’ಗೆ ಬಲಿ

ಮುಂಬೈ : ಕಿರುತೆರೆ ನಟಿ ದಿವ್ಯಾ ಭಟ್ನಾಗರ್ (34) ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಅರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದಿವ್ಯಾ ಭಟ್ನಗರ್ ಅವರು ಹಾಸ್ಯ ಕಾರ್ಯಕ್ರಮ ತೇರಾ ಯಾರ್ ಹೂ ಮೇ’ ನಲ್ಲಿ ರೀನಾ ಅಗರ್ವಾಲ್ ಪಾತ್ರ ಮಾಡುತ್ತಿದ್ದರು.

ಮುಂದೆ ಓದಿ