ಭಾರತೀಯರಿಗೆ ಥೈಲ್ಯಾಂಡ್ ವೀಸಾ ಮುಕ್ತ (Visa Free Entry) ಪ್ರವೇಶ ನೀತಿಯ ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದ್ದು, ಇದು 2024ರ ನವೆಂಬರ್ 11ರಂದು ಕೊನೆಗೊಳ್ಳಲಿದೆ. ಈ ನೀತಿಯ ಅನ್ವಯ ಭಾರತೀಯ ಸಂದರ್ಶಕರು ವೀಸಾ ಇಲ್ಲದೆ 60 ದಿನಗಳವರೆಗೆ ಥೈಲ್ಯಾಂಡ್ನಲ್ಲಿ ಉಳಿಯಬಹುದು. ಇದರೊಂದಿಗೆ ಸ್ಥಳೀಯ ವಲಸೆ ಕಚೇರಿಯ ಅನುಮತಿ ಪಡೆದು ಹೆಚ್ಚುವರಿ 30 ದಿನಗಳವರೆಗೆ ಉಳಿಯುವ ಆಯ್ಕೆ ಇರುತ್ತದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್ ನಲ್ಲಿ ಪ್ರಯಾಣವನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಹೊಂದಿದೆ.