ಜಿ೨೦ ಶೃಂಗಸಭೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಸೂಪರ್‌ಪವರ್ ದೇಶವಾಗಿ ಭಾರತ ಹೊರಹೊಮ್ಮಿದೆ. ಹೇಗೆಯೇ ನೋಡಿದರೂ ರಾಜತಾಂತ್ರಿಕವಾಗಿ ಇದೊಂದು ಅತ್ಯಂತ ಮಹತ್ವದ ಯಶಸ್ಸು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಚೀನಾವನ್ನೂ ಹಿಂದಿಕ್ಕಿ ದಕ್ಷಿಣ ಭೂಗೋಳ ರಾಷ್ಟ್ರಗಳ ಅನಭಿಷಿಕ್ತ, ಅವಿರೋಧ ನಾಯಕ ನಾಗಿ ಭಾರತ ಬಿಂಬಿತವಾಗಿದ್ದು, ವಿಶ್ವದ ೫ನೇ ಪ್ರಬಲ ರಾಷ್ಟ್ರ ತಾನೆಂಬುದನ್ನು ಆಧಾರ ಸಹಿತ ಸಾಬೀತುಪಡಿಸಿಕೊಳ್ಳುವುದರೊಂದಿಗೆ ಎಲ್ಲ ವಿಚಾರಗಳಲ್ಲೂ ಉತ್ತರದ ರಾಷ್ಟ್ರಗಳ ಜತೆ ಕೊಂಡಿಯಾಗಿ ನಿಲ್ಲುವ ಛಾತಿಯನ್ನು ತೋರಿದೆ. ಇದರ ಪ್ರತೀಕವಾಗಿ, ಇಷ್ಟು ವರ್ಷಗಳ ಪ್ರಯತ್ನದ […]