Saturday, 14th December 2024

ಸಾಕ್ಷ್ಯಾಧಾರ ಕೊರತೆ: ಅಬ್ದುಲ್ ಕರೀಂ ತುಂಡಾ ಖುಲಾಸೆ

ಅಜ್ಮೀರ್: 1993ರ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಟಾಡಾ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಇನ್ನಿಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಹಮೀದುದ್ದೀನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2013 ರಲ್ಲಿ, ಭೂಗತ ಪಾತಕಿ ಮತ್ತು 1993 ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ಸಹಾಯಕ ತುಂಡಾನನ್ನು ಭಾರತ-ನೇಪಾಳ ಗಡಿಯಿಂದ ಬಂಧಿಸಲಾಯಿತು, ಲಕ್ನೋ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈನಲ್ಲಿ […]

ಮುಂದೆ ಓದಿ