ನವದೆಹಲಿ: ಕೆಲವು ದೇಶಗಳ ಮೇಲೆ ಆಮದು ಅವಲಂಬನೆಯನ್ನು ವೈವಿಧ್ಯಗೊಳಿಸಲು, ದೇಶೀಯ ಉತ್ಪಾದನೆಯಲ್ಲಿನ ಕೊರತೆಯನ್ನು ನೀಗಿಸಲು ಭಾರತವು ಮೊದಲ ಬಾರಿಗೆ ಬ್ರೆಜಿಲ್ ನಿಂದ ಉದ್ದಿನ ಬೇಳೆಯನ್ನು ಪಡೆಯಲು ಪ್ರಾರಂಭಿಸಿದೆ. ದಕ್ಷಿಣ ಅಮೆರಿಕಾದ ದೇಶದಿಂದ ಸುಮಾರು 3000 ಟನ್ ಉದ್ದಿನ ಬೇಳೆಯನ್ನು ಮೊದಲ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. “ಒಂದು ದೇಶವನ್ನು ಅವಲಂಬಿಸುವುದರಿಂದ ಅಪಾಯವಿರುವುದರಿಂದ ಉದ್ದು ಮತ್ತು ತೊಗರಿ ಆಮದಿಗಾಗಿ ನಾವು ಬ್ರೆಜಿಲ್ ಮತ್ತು ಅರ್ಜೆಂಟೀನಾ ದೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಬ್ರೆಜಿಲ್ […]