ತುರುವೇಕೆರೆ: ಕೀಟನಾಶಕ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳ ದಾಳಿ ನಡೆಸಿ ಪರವಾನಗಿ ಇಲ್ಲದ, ನೋಂದಾಯಿತವಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದ ಟಿ.ಬಿ.ಕ್ರಾಸ್ – ತುರುವೇಕೆರೆ ರಸ್ತೆಯಲ್ಲಿರುವ ಪಿ.ಎಂ. ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಕೀಟನಾಶಕ ಪರವಾನಗಿ ಇಲ್ಲದೆ, ನೋಂದಾಯಿತವಲ್ಲದ ಮತ್ತು ದಾಖಲಾತಿ ನಿರ್ವಹಣೆ ಇಲ್ಲದೆ ಅನಧಿಕೃತವಾಗಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ […]