ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವನ್ನು ಫೆಬ್ರವರಿ 10 ರವರೆಗೆ ಒಂದು ದಿನ ವಿಸ್ತರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬುಧವಾರ ಪ್ರಕಟಿಸಿದರು. ಜನವರಿ 31 ರಂದು ಆರಂಭವಾದ ಅಧಿವೇಶನವು ಫೆ.9 ರಂದು ಕೊನೆಗೊಳ್ಳಲಿದೆ. 2014ರ ಮೊದಲು ಮತ್ತು ನಂತರ ಕಾಂಗ್ರೆಸ್ ಅನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಭಾರತದ ಆರ್ಥಿಕತೆಯ ಸ್ಥಿತಿಯನ್ನು ಹೋಲಿಸಿ ಸರ್ಕಾರ ‘ಶ್ವೇತಪತ್ರ’ ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹಣಕಾಸು ಮಸೂದೆ, ಬಜೆಟ್ ಚರ್ಚೆ ಮತ್ತು ಅನುದಾನಕ್ಕಾಗಿ […]