ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ₹ 25 ಕೋಟಿ ಮೌಲ್ಯದ 30 ಕೆ.ಜಿಯಷ್ಟು ನಿಷೇಧಿತ ವಸ್ತುವನ್ನು ಜಪ್ತಿ ಮಾಡಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಭದ್ರತಾಪಡೆಗಳು ಗಮನಿಸಿ, ಶೋಧ ಕಾರ್ಯ ಕೈಗೊಂಡವು. ಡ್ರಗ್ಸ್ ಹೋಲುವಂತಹ ವಸ್ತುವನ್ನು ಬೀಳಿಸಿದ್ದನ್ನು ಪತ್ತೆ ಹಚ್ಚಿ, ಆ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಹಿರಿಯ ಎಸ್ಪಿ ರಯೀಸ್ ಭಟ್ ತಿಳಿಸಿದರು. ಎಲ್‌ಒಸಿಯ ಭಾರತದ ಗಡಿಯೊಳಗೆ ಮಾದಕವಸ್ತುವಿನ ಕಳ್ಳಸಾಗಣೆಗೆ ಪೆಡ್ಲರ್‌ಗಳು […]