ಹೈದರಾಬಾದ್: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್ನಲ್ಲಿ ಪ್ರಕರಣ ದಾಖಲಾಗಿದೆ. ತೇಜಸ್ವಿ ಅವರು ಉಸ್ಮೇನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಿಜೆಪಿ ಪರ ಪ್ರಚಾರಕ್ಕೆ ಹೈದರಾಬಾದ್ ತೆರಳಿದ್ದ ತೇಜಸ್ವಿ ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಉಸ್ಮೇನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆದರೆ ಪ್ರವೇಶದ್ವಾರದಲ್ಲಿ ಬೇಲಿ ಹಾಕಿ ಸಂಸದರನ್ನು ತಡೆಯಲಾಗಿತ್ತು. ಹೀಗಾಗಿ, ಬೇಲಿಯನ್ನು ತೆರವುಗೊಳಿಸಿ ವಿವಿ ಪ್ರವೇಶಿಸಿದ್ದರು. ತಮ್ಮ ಅನುಮತಿ ಇಲ್ಲದೆಯೆ ಬೇಲಿ ತೆರವುಗೊಳಿಸಿ ವಿವಿಗೆ ನುಗ್ಗಿರು ವುದಾಗಿ ವಿಶ್ವವಿದ್ಯಾಲಯ […]