ಆಗ್ರಾ: ಮಧ್ಯಪ್ರದೇಶದ ಭೋಪಾಲ್ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್ಗೆ ಸಂಪರ್ಕ ಕಲ್ಪಿಸುವ ರೈಲಿನ ಮೇಲೆ ಮತ್ತೆ ಕಲ್ಲು ತೂರಲಾಗಿದೆ. ಈ ಘಟನೆಯಿಂದ ಕಿಟಕಿಯ ಗಾಜುಗಳಿಗೆ ಹಾನಿಯಾಗಿದ್ದು, 12 ನೇ ಬಾರಿಗೆ ಈ ರೈಲಿನ ಮೇಲೆ ದಾಳಿ ನಡೆದಿರುವುದು ಆತಂಕದ ಸಂಗತಿಯಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಮಧ್ಯಪ್ರದೇಶದ ಭೋಪಾಲ್‌ಗೆ ಹೊರಟಿತ್ತು. ಮಥುರಾದ ಭೂತೇಶ್ವರ ಮತ್ತು ಮಥುರಾ ಕ್ಯಾಂಟ್ ನಿಲ್ದಾಣದ ನಡುವೆ ರೈಲು ಚಲಿಸುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿನಲ್ಲಿ ಕಲ್ಲು ಹೊಡೆಯಲಾಗಿದೆ. ಹೆಚ್ಚಿನ ಕಲ್ಲುಗಳು […]