ಉತ್ತರಪ್ರದೇಶದಲ್ಲಿ, ಅತ್ಯಾಚಾರ ಹತ್ಯೆೆಗೆ ಬಲಿಯಾದ 19 ವರ್ಷದ ಬಡ ಹುಡುಗಿ ದೇಶದ ಮುಂಚೂಣಿ ಚರ್ಚೆಗೆ ಬಂದು ಮತ್ತೆ ಜೀವಂತವಾಗಿದ್ದಾಳೆ. ನಮ್ಮ ಮನದಲ್ಲಿ ಹಲವು ವಿಷಯಗಳ ಮಂಥನಕ್ಕೆ ಕಾರಣ ಎನಿಸಿ, ಮತ್ತದೇ ಅಸಹಾಯಕ ಸ್ಥಿತಿಗೆ ತಲುಪಿಸುತ್ತಿದ್ದಾಳೆ. ಈ ಕ್ರೌರ್ಯಕ್ಕೆೆ ಕೊನೆಯೇ ಇಲ್ಲವೇ? ಗೌರವ, ಅಭಿಮಾನ ಸ್ವತಂತ್ರ ಬದುಕು ನಮಗೆ, ಅಂದರೆ ಹೆಣ್ಣು ಕುಲಕ್ಕೆ ಗಗನ ಕುಸುಮವೇ? ಅದೇಕೋ ಈ ಒಂದು ನಿರಾಶೆ ನಿಧಾನವಾಗಿ ಆವರಿಸುತ್ತಿದೆ. ಸ್ಮಿತಾ ಮೈಸೂರ ಹುಬ್ಬಳ್ಳಿ ಆ ಹುಡುಗಿ ಅಂದು ಅಮ್ಮನ ಜತೆ ಊರಿಗೆ ಹೋಗಿದ್ದರೆ […]