ರಾಷ್ಟೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು ಮತ್ತು ನಾಯಕರ ಜಯಂತಿಗೆ ನಿಗದಿತ ದಿನಗಳಿರುವಂತೆಯೇ ವಿಶ್ವ ಆತ್ಮಹತ್ಯೆ ತಡೆ ದಿನವೂ ಇದೆ. ಸೆ.10ರ ದಿನವನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಜಗತ್ತಿನ ಎಲ್ಲ ದೇಶಗಳು ಜಾತಿ-ಮತ, ಭಾಷೆ, ಪ್ರದೇಶ, ಗಡಿಗಳ ಗೊಡವೆ ಇಲ್ಲದೆ ಆಚರಿಸಬಹುದು. ಏಕೆಂದರೆ ಜಗತ್ತಿನ ಭೂಪಟದಲ್ಲಿ ಇದುವರೆಗೆ ಒಬ್ಬರೂ ಆತ್ಮಹತ್ಯೆ ಮಾಡಿಕೊಳ್ಳದ ದೇಶಗಳಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ೭ ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ […]