ಮತ್ತೆ ಇಳಿಕೆಯಾಯ್ತು ಚಿನ್ನದ ದರ
Gold Silver Price Today: ಸತತ 2ನೇ ದಿನವಾದ ಮಂಗಳವಾರ (ಮಾರ್ಚ್ 24)ವೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 270 ರುಪಾಯಿ ಕಡಿಮೆಯಾಗಿದ್ದು 12,865 ರುಪಾಯಿಗೆ ಕುಸಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 294 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಬಂದು ತಲುಪಿದೆ.