ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
IAF officer Attacked: ಬಯಲಾಯ್ತು ಐಎಎಫ್‌ ಅಧಿಕಾರಿ ಕೃತ್ಯ; ಯುವಕನ ಮೇಲೆ ತಾನೇ ಹಲ್ಲೆ ಮಾಡಿ ದೂರು ಸಲ್ಲಿಕೆ! ಇಲ್ಲಿದೆ ವಿಡಿಯೋ

ಯುವಕನ ಮೇಲೆ ತಾನೇ ಹಲ್ಲೆ ಮಾಡಿ ದೂರು ಸಲ್ಲಿಸಿದ ಐಎಎಫ್‌ ಅಧಿಕಾರಿ!

IAF officer Attacked: ಬೆಂಗಳೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದರು. ಆದರೆ ಇದೀಗ ಯುವಕನನ್ನು ಅಧಿಕಾರಿಯೇ ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಬೆಳಕಿಗೆ ಬಂದಿದೆ. ಬಳಿಕ ಅಧಿಕಾರಿಯೇ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

BJP Jan akrosh yatra: ಕಾಂಗ್ರೆಸ್ ಸರಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

ಕಾಂಗ್ರೆಸ್ ಸರಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

BJP Jan akrosh yatra: ಜನಾಕ್ರೋಶ ಯಾತ್ರೆ ಭಾಗವಾಗಿ ದಾವಣಗೆರೆಯಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮಾತನಾಡಿದ್ದಾರೆ. ಸಿದ್ದರಾಮಯ್ಯನವರು ಕೇವಲ ಮುಸಲ್ಮಾನರ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದಾಗಿ ವಿಜಯೇಂದ್ರ ಕಿಡಿಕಾರಿದ್ದಾರೆ.

Physical abuse: ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿ ಮಾಡಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಮಗಳನ್ನೇ ಗರ್ಭಿಣಿ ಮಾಡಿದ್ದ ತಂದೆಗೆ ಜೀವಾವಧಿ ಶಿಕ್ಷೆ

Physical abuse: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ ತಂದೆಗೆ ಜೀವಾವಧಿ ಶಿಕ್ಷೆ ಹಾಗೂ 80 ಸಾವಿರ ರೂ. ದಂಡ ವಿಧಿಸಿದೆ.

Kalaburagi News: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಗಲ್ಲು ಶಿಕ್ಷೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ; ಅಪರಾಧಿಗೆ ಗಲ್ಲು ಶಿಕ್ಷೆ

Kalaburagi News: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಪುಸ್ತಕ ತರಲು ಹೋಗುತ್ತಿದ್ದ ಬಾಲಕಿಯನ್ನು ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಬಾಯಿ ಒತ್ತಿ ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಉಸಿರುಗಟ್ಟಿಸಿ ಕೊಂದು ಪಕ್ಕದ ಹೊಲದ ಬಾವಿಯಲ್ಲಿ ಶವವನ್ನು ಎತ್ತಿ ಹಾಕಿದ್ದ. ಈ ಪ್ರಕರಣದಲ್ಲಿ ಅಪರಾಧಿಗೆ ಕೋರ್ಟ್‌ ಶಿಕ್ಷೆ ಪ್ರಕಟಿಸಿದೆ.

IAF officer Attacked: ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್‌; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ! ಇಲ್ಲಿದೆ ವಿಡಿಯೋ

ಐಎಎಫ್‌ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್‌

IAF officer Attacked: ಪ್ರಕರಣದ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಪ್ರತಿಕ್ರಿಯಿಸಿ, ಇದು ರೋಡ್‌ ರೇಜ್‌ ಪ್ರಕರಣ ಎಂಬುವುದು ಸ್ಪಷ್ಟವಾಗಿದೆ. ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಬಹಳ ಸಾಮಾನ್ಯವಾಗಿದೆ. ಹಲ್ಲೆಗೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Karnataka Weather: ರಾಜ್ಯದ ಉತ್ತರ, ದಕ್ಷಿಣ ಒಳನಾಡಲ್ಲಿ ಏ.24ರವರೆಗೆ ಮುಂದುವರಿಯಲಿದೆ ಮಳೆಯ ಅಬ್ಬರ

ರಾಜ್ಯದ ಉತ್ತರ, ದಕ್ಷಿಣ ಒಳನಾಡಲ್ಲಿ ಏ.24ರವರೆಗೆ ಭಾರಿ ಮಳೆ ಸಾಧ್ಯತೆ

Karnataka Rains: ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಗಲಿನಲ್ಲಿ ಆಕಾಶವು ಬಹುತೇಕ ಶುಭ್ರವಾಗಿದ್ದು, ರಾತ್ರಿ ವೇಳೆಗೆ ಭಾಗಶಃ ಮೋಡ ಕವಿದಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 23°C ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

DK Shivakumar: ಸರ್ಕಾರ ಮತ್ತು ಜನರ ನಡುವೆ ಅರ್ಚಕರು ನೀವು; ಸರ್ಕಾರಿ ನೌಕರರಿಗೆ ಡಿಕೆಶಿ ಕಿವಿಮಾತು

ಸರ್ಕಾರ ಮತ್ತು ಜನರ ನಡುವೆ ಅರ್ಚಕರು ನೀವು: ಡಿಕೆಶಿ

DK Shivakumar: ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ- 2025 ಮತ್ತು ರಾಜ್ಯ ಮಟ್ಟದ ʼಸರ್ವೋತ್ತಮ ಸೇವಾʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಅಧಿಕಾರ ಇದ್ದರೆ ಜನಸಾಮಾನ್ಯರಿಗೂ ಸಹಾಯ ಮಾಡುವ ಅವಕಾಶ ದೊರೆಯತ್ತದೆ. ಸಿಕ್ಕಿರುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ಸಲಹೆ ನೀಡಿದ್ದಾರೆ.

IAF officer Attacked: ಐಎಎಫ್‌ ಅಧಿಕಾರಿ ಮೇಲೆ ಹಲ್ಲೆ; ಬೈಯಪ್ಪನಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಬೆಂಗಳೂರಿನಲ್ಲಿ ಐಎಎಫ್‌ ಅಧಿಕಾರಿ ಮೇಲೆ ಹಲ್ಲೆ; ಎಫ್‌ಐಆರ್‌ ದಾಖಲು

IAF officer Attacked: ಬೆಂಗಳೂರಿನ ಸಿ.ವಿ.ರಾಮನ್‌ ನಗರದಲ್ಲಿ ಐಎಎಫ್‌ ಅಧಿಕಾರಿ ಶಿಲಾಧಿತ್ಯ ಬೋಸ್ ಮೇಲೆ ಹಲ್ಲೆ ಭಾನುವಾರ ಸಂಜೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆಯಿಂದ ವಾಯುಸೇನೆ ಅಧಿಕಾರಿ ಮುಖ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.

IAF officer Attacked: ಬೆಂಗಳೂರಲ್ಲಿ ಮತ್ತೊಂದು ರೋಡ್‌ ರೇಜ್‌; ವಾಯುಸೇನೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್‌

ಬೆಂಗಳೂರಿನಲ್ಲಿ ವಾಯುಸೇನೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ

IAF officer Attacked: ಬೆಂಗಳೂರಿನ ನಗರದ ಸಿ.ವಿ.ರಾಮನ್‌ ನಗರದಲ್ಲಿ ರೋಡ್‌ ರೇಜ್‌ ಪ್ರಕರಣ ನಡೆದಿದೆ. ಘಟನೆ ಬಗ್ಗೆ ನಾವು ದೂರು ನೀಡಲು ಹೋದಾಗ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದಾರೆ.

Hindi vs Kannada:  ʼಹಿಂದಿ ಕಲಿʼ ಎಂದು ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದ ಹಿಂದಿ ಭಾಷಿಕ, ಕನ್ನಡದಲ್ಲೇ ಕ್ಷಮೆಯಾಚನೆ!

ಹಿಂದಿ ಕಲಿʼ ಎಂದು ಧಮ್ಕಿ ಹಾಕಿದ್ದ ಹಿಂದಿ ಭಾಷಿಕ, ಕನ್ನಡದಲ್ಲೇ ಕ್ಷಮೆಯಾಚನೆ!

Hindi vs Kannada: ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದ ಹಿಂದಿ ಭಾಷಿಕ, ಕನ್ನಡಿಗರ ಕ್ಷಮೆ ಕೋರಿದ್ದಾನೆ. ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾನೆ.

Road Accident: ಭೀಕರ ರಸ್ತೆ ಅಪಘಾತ, ಕಾರು ಕ್ಯಾಂಟರ್‌ಗೆ ಡಿಕ್ಕಿಯಾಗಿ ಟೆಕ್ಕಿ ಸಾವು

ಭೀಕರ ರಸ್ತೆ ಅಪಘಾತ, ಕಾರು ಕ್ಯಾಂಟರ್‌ಗೆ ಡಿಕ್ಕಿಯಾಗಿ ಟೆಕ್ಕಿ ಸಾವು

ಮೃತ ಇಂಜಿನಿಯರ್ ಅನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಅಶ್ವಿನಿ (33) ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀಕಾಂತ್ ಭಟ್ (37) ಮತ್ತು 2 ವರ್ಷದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Om Prakash Murder Case: ಕೊಲೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್‌ಗೆ ಒಂದು ವಾರದಿಂದ ಟಾರ್ಚರ್?‌ ಪತ್ನಿ- ಮಗಳ ಮೇಲೆ ಎಫ್‌ಐಆರ್

ಓಂ ಪ್ರಕಾಶ್‌ಗೆ ಒಂದು ವಾರದಿಂದ ಟಾರ್ಚರ್?‌ ಪತ್ನಿ- ಮಗಳ ಮೇಲೆ ಎಫ್‌ಐಆರ್

ಕಳೆದ ಒಂದು ವಾರದಿಂದ ಓಂ ಪ್ರಕಾಶ್ ಅವರಿಗೆ ಪತ್ನಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗ್ತಿದೆ. ಇದರಿಂದ ಓಂ ಪ್ರಕಾಶ್ ಅವರು ತನ್ನ ತಂಗಿ ಸರೀತಾ ಕುಮಾರಿ ಮನೆಗೆ ಹೋಗಿದ್ದರು. ಅಲ್ಲೂ ಇರಲು ಬಿಡದ ಪತ್ನಿ ಪಲ್ಲವಿ, ಕರೆದುಕೊಂಡು ಬರಲು ಮಗಳನ್ನು ಕಳುಹಿಸಿದ್ದರು ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ಮಗಳು ಕೃತಿ ಅತ್ತೆ ಮನೆಗೆ ಹೋಗಿ ತಂದೆಯನ್ನು ವಾಪಸ್ ಕರೆತಂದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

B S Yediyurappa: ಬಿ.ಎಸ್.ಯಡಿಯೂರಪ್ಪ ವಿರುದ್ಧದ ಡಿನೋಟೀಫಿಕೇಷನ್ ಕೇಸ್‌ ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಬಿಎಸ್‌ವೈ ವಿರುದ್ಧದ ಡಿನೋಟೀಫಿಕೇಷನ್ ಪ್ರಕರಣ ಸುಪ್ರೀಂ ವಿಸ್ತೃತ ಪೀಠಕ್ಕೆ

B S Yediyurappa: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಸುಪ್ರೀಂ‌ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

Judges Transfer: ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರ ವರ್ಗಾವಣೆ

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರ ವರ್ಗಾವಣೆ

ನ್ಯಾಯಾಂಗ ಆಡಳಿತದ ಗುಣಮಟ್ಟ ಸುಧಾರಣೆ ಹಾಗೂ ಹೈಕೋರ್ಟ್‌ ಮಟ್ಟದಲ್ಲಿ ಸಮಗ್ರತೆ ಹಾಗೂ ವೈವಿಧ್ಯತೆಯ ಹೆಚ್ಚಳಕ್ಕಾಗಿ ಈ ವರ್ಗಾವಣೆಗಳನ್ನು ಮಾಡಲಾಗಿದೆ ಎಂದು ಕೊಲಿಜಿಯಂ ತಿಳಿಸಿದೆ. ಏಪ್ರಿಲ್‌ 15 ಹಾಗೂ 19ರಂದು ನಡೆಸಲಾದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೀಟಿಂಗ್‌ನಲ್ಲಿ ನೀಡಲಾದ ಸೂಚನೆಯಂತೆ ಈ ವರ್ಗಾವಣೆ ನಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Cow slaughter: ಗಬ್ಬದ ಹಸು ಕಡಿದು ಭ್ರೂಣ ಎಸೆದ ಪಾತಕಿ ಎರಡೇ ದಿನದಲ್ಲಿ ಅಂದರ್‌

ಗಬ್ಬದ ಹಸು ಕಡಿದು ಭ್ರೂಣ ಎಸೆದ ಪಾತಕಿ ಎರಡೇ ದಿನದಲ್ಲಿ ಅಂದರ್‌

ಹೊನ್ನಾವರದಲ್ಲಿ ಗರ್ಭಿಣಿ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಭಟ್ಕಳದಲ್ಲಿಯೂ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದರಿಂದ ನಾಗರಿಕರು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಗೋವನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಹನೀಫಾಬಾದ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಹವ್ವಾ ಎಂದು ಗುರುತಿಸಲಾಗಿದೆ.

Gold Price Today: ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್‌! ಗಗನಕ್ಕೇರಿದ ಚಿನ್ನದ ರೇಟ್‌

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 21st April 2025: ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 70ರೂ. ಏರಿಕೆ ಆಗಿ 9,015ರೂ. ಇದ್ದು, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 77ರೂ. ಏರಿಕೆ ಆಗಿ ಪ್ರಸ್ತುತ 9,835 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,120 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,150 ರೂ. ಮತ್ತು 100 ಗ್ರಾಂಗೆ 9,01,500 ರೂ. ನೀಡಬೇಕಾಗುತ್ತದೆ.

Actor Yash: ʼರಾವಣʼನಾಗುವ ಮುನ್ನ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆದ ರಾಕಿಂಗ್‌ ಸ್ಟಾರ್‌ ಯಶ್

ʼರಾವಣʼನಾಗುವ ಮುನ್ನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದ ನಟ ಯಶ್

ʼರಾಮಾಯಣʼ ಚಿತ್ರದಲ್ಲಿ ನಟಿಸುವುದರ ಜೊತೆಗೆ ತಮ್ಮ ಮಾನ್ಸ್‌ರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರವನ್ನು ಅವರು ನಿರ್ಮಾಣ ಸಹ ಮಾಡುತ್ತಿದ್ದಾರೆ. 2026ರಲ್ಲಿ ಇದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

Murder Case: ಉಸಿರುಗಟ್ಟಿಸುವ ಶಿಸ್ತಿಗೆ ಬೇಸತ್ತು ಉಸಿರುಗಟ್ಟಿಸಿ ತಂದೆಯನ್ನು ಕೊಲೆ ಮಾಡಿದ ಮಗ, ಪತ್ನಿ

ಉಸಿರುಗಟ್ಟಿಸುವ ಶಿಸ್ತಿಗೆ ಬೇಸತ್ತು ತಂದೆಯನ್ನು ಕೊಲೆ ಮಾಡಿದ ಮಗ, ಪತ್ನಿ

ಬೋಲು ಅರಬ್‌ ಶಿಸ್ತಿನ ವ್ಯಕ್ತಿಯಾಗಿದ್ದರು. ಪತ್ನಿ ಮತ್ತು ಪುತ್ರನಿಗೂ ಶಿಸ್ತಿನಿಂದ ಇರುವಂತೆ ಹೇಳುತ್ತಿದ್ದರು. ವಿನಾಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ. ಬೋಲು ಅರಬ್‌ರ ಈ ಶಿಸ್ತು ಪತ್ನಿ ಮತ್ತು ಪುತ್ರನಿಗೆ ಮಾನಸಿಕ ಹಿಂಸೆ ನೀಡುತ್ತಿತ್ತು. ಹೀಗಾಗಿ ತಾಯಿ-ಮಗ ಸೇರಿಕೊಂಡು ಬೋಲು ಅರಬ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

Self Harming: ಮಾಜಿ ಲವರ್‌ನಿಂದ ಬ್ಲ್ಯಾಕ್‌ಮೇಲ್‌, ಮದುವೆಯ ಹೊಸ್ತಿಲಲ್ಲಿ ಯುವತಿ ಆತ್ಮಹತ್ಯೆ

ಮಾಜಿ ಲವರ್‌ನಿಂದ ಬ್ಲ್ಯಾಕ್‌ಮೇಲ್‌, ಮದುವೆಯ ಹೊಸ್ತಿಲಲ್ಲಿ ಯುವತಿ ಆತ್ಮಹತ್ಯೆ

5 ವರ್ಷಗಳ ಹಿಂದೆ ಮೈಲಾರಿ ಎಂಬ ಯುವಕನ ಜೊತೆ ಈಕೆಗೆ ಲವ್ ಆಗಿ ಬ್ರೇಕಪ್ ಆಗಿತ್ತು. ನಂತರ ಮೈಲಾರಿ ತನ್ನನ್ನು ಮದುವೆ ಆಗಲು ಕಿರುಕುಳ ನೀಡುತ್ತಿದ್ದ. ನನ್ನನ್ನು ಮದುವೆ ಆಗದೇ ಇದ್ದರೆ ನನ್ನ ಜೊತೆ ಇರುವ ನಿನ್ನ ಫೋಟೋ, ವೀಡಿಯೋ ವೈರಲ್ ಮಾಡುತ್ತೇನೆ ಎಂದು ಈತ ಬೆದರಿಕೆ ಹಾಕಿದ್ದ.

Women Reservation: ಇನ್ನು ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇ. 50 ಸೀಟುಗಳು ಮೀಸಲು

ಇನ್ನು ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇ. 50 ಸೀಟುಗಳು ಮೀಸಲು

ಪ್ರತೀ ತರಗತಿಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡಾ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲು, ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೇ ಇದ್ದಾಗ ಉಳಿದ ಸೀಟುಗಳನ್ನು ಬಾಲಕರಿಗೆ ಹಂಚಿಕೆ ಮಾಡಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಬಾಲಕಿಯರಿಗೆ ಮೀಸಲು ಇಡಬೇಕು.

Self Harming: ಲಿವಿಂಗ್‌ ಟುಗೆದರ್‌ ಬೇಡವೆಂದು ಬುದ್ಧಿ ಹೇಳಿದ ಪೋಷಕರು, ರೈಲಿಗೆ ತಲೆಕೊಟ್ಟ ಯುವಕ

ಲಿವಿಂಗ್‌ ಟುಗೆದರ್‌ ಬೇಡವೆಂದ ಪೋಷಕರು, ರೈಲಿಗೆ ತಲೆಕೊಟ್ಟ ಯುವಕ

ಮಹಿಳೆಯ ಜೊತೆ ಲಿವಿಂಗ್‌ ಟುಗೆದರ್‌ನಲ್ಲಿದ್ದ ಯುವಕನಿಗೆ, ಇಂಥ ಸಂಬಂಧ ಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದರು. ಇದರಿಂದ ನೊಂದ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಹಿಳೆಗೂ ಗಾಯಗಳಾಗಿವೆ.

Om Prakash murder: ಗನ್‌ ತೋರಿಸಿ ಬೆದರಿಸುತ್ತಿದ್ದ ಓಂಪ್ರಕಾಶ್‌, 10 ಬಾರಿ ಚೂರಿಯಿಂದ ಇರಿದ ಪತ್ನಿ

ಗನ್‌ ತೋರಿಸಿ ಬೆದರಿಸುತ್ತಿದ್ದ ಓಂ ಪ್ರಕಾಶ್‌, 10 ಬಾರಿ ಚೂರಿ ಇರಿದ ಪತ್ನಿ

ಮೂರು ದಿನಗಳ ಹಿಂದೆ ಐಪಿಎಸ್‌ ಫ್ಯಾಮಿಲಿ ವಾಟ್ಸಾಪ್​ ಗ್ರೂಪ್​ನಲ್ಲಿ ಓಂ ಪ್ರಕಾಶ್‌ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್" ದಾಖಲಿಸುವಂತೆ ಮೆಸೇಜ್ ಮಾಡಿದ್ದರಂತೆ.

Karnataka Weather: ಯೆಲ್ಲೋ ಅಲರ್ಟ್; ಇಂದು ಬೆಂಗಳೂರು, ಕೊಡಗು ಸೇರಿ ಈ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

ಇಂದು ಬೆಂಗಳೂರು, ಕೊಡಗು ಸೇರಿ ಈ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33°C ಮತ್ತು 22°C ಇರುವ ಸಾಧ್ಯತೆ ಇದೆ.

ಬವೇರಿಯಾದ ಸಚಿವರ ಜತೆಗೆ ಮಾತುಕತೆ ನಡೆಸಿ ಕಿಯಾನಿಕ್ಸ್‌ಗೆ ಜಾಗತಿಕ ಬೆಳವಣಿಗೆಯ ದಾರಿ ಸೂಚಿಸಿದ ಅಧ್ಯಕ್ಷ ಶರತ್‌ ಬಚ್ಚೇಗೌಡ

ಬವೇರಿಯಾದ ಸಚಿವರ ಜತೆಗೆ ಮಾತುಕತೆ ನಡೆಸಿದ ಶರತ್‌ ಬಚ್ಚೇಗೌಡ

ಕರ್ನಾಟಕದ ಜತೆಗೆ ಸುಸ್ಥಿರವಾದ, ಡಿಜಿಟಲ್‌ ಪರಿಹಾರಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಕರ್ನಾ ಟಕದ ಜತೆಗೆ ಸಹಯೋಗ ಹೊಂದುವ ಕುರಿತು ಬವೇರಿಯಾದ ನಿಯೋಗ ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿತು. ಪ್ರಾದೇಶಿಕವಾದ ಸಾಮರ್ಥ್ಯಗಳನ್ನು ಮತ್ತು ಪರಸ್ಪರರ ಆವಿಷ್ಕಾರಗಳನ್ನು ಬಳಸಿ ಕೊಳ್ಳಲು ಬವೇರಿಯಾ ತನ್ನ ಇಂಗಿತವನ್ನು ವ್ಯಕ್ತಪಡಿಸಿತು