ಏ. 4: ಕಲಾವಿದ ಎಂ.ಟಿ.ವಿ. ಆಚಾರ್ಯರ ಸ್ಮರಣಾರ್ಥ ಪೇಂಟಿಂಗ್ ಪ್ರದರ್ಶನ
ಭಾರತೀಯ ಕಲಾ ಲೋಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಎಂ.ಟಿ.ವಿ. ಆಚಾರ್ಯ ಅವರ ಜೀವನ ಮತ್ತು ಕೃತಿಗಳನ್ನು ಸಂಭ್ರಮಿಸುವ ವಿಶೇಷ ಸ್ಮರಣಾರ್ಥ ಪ್ರದರ್ಶನವನ್ನು ಏ. 4ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಏರ್ಪಡಿಸಲಾಗಿದೆ.