ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs PBKS Qualifier 2: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌

ಶ್ರೇಯಸ್ ಅಯ್ಯರ್ ಐಪಿಎಲ್‌ ಇತಿಹಾಸದಲ್ಲಿ 3 ತಂಡಗಳನ್ನು ಮುನ್ನಡೆಸಿ ಫೈನಲ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಮೈಲುಗಲ್ಲು ನೆಟ್ಟರು. 2020 ರ ಋತುವಿನಲ್ಲಿ ಡೆಲ್ಲಿ ತಂಡವನ್ನು ಫೈನಲ್‌ ತಲುಪಿಸಿದ್ದರು. ಇದಾದ ಬಳಿಕ 2024 ರಲ್ಲಿ ಕೆಕೆಆರ್‌ ತಂಡವನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್‌ ಮಾಡಿದ್ದರು. ಇದೀಗ ಪಂಜಾಬ್‌ ತಂಡವನ್ನು ಫೈನಲ್‌ ತಲುಪಿಸಿದ್ದು ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ.

ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌

Profile Abhilash BC Jun 2, 2025 9:19 AM

ಅಹಮದಾಬಾದ್‌: ಮುಂಬೈ ಇಂಡಿಯನ್ಸ್‌(Mumbai Indians) ವಿರುದ್ಧ ಕ್ವಾಲಿಫೈಯರ್‌-2(MI vs PBKS Qualifier 2) ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿ 2014ರ ಬಳಿಕ ಫೈನಲ್‌ ಪ್ರವೇಶಿಸಿದ ಪಂಜಾಬ್‌ ಕಿಂಗ್ಸ್‌(Punjab Kings) ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಫೈನಲ್‌ ಪ್ರವೇಶಿಸಿದ ಪಂಜಾಬ್‌ ಜೂ.3ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಕ್ವಾಲಿಫೈಯರ್‌-1 ರಲ್ಲಿ ಆರ್‌ಸಿಬಿ, ಪಂಜಾಬ್‌ಗೆ ಸೋಲುಣಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಉಭಯ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.

ದಾಖಲೆ ಪಟ್ಟಿ ಹೀಗಿದೆ

  1. 200 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್‌ ನಡೆಸುವ ಮೂಲಕ ಐಪಿಎಲ್ ಪ್ಲೇಆಫ್/ನಾಕೌಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಯಿತು.
  2. ಐಪಿಎಲ್‌ನ ಇದುವರೆಗಿನ ಇತಿಹಾಸದಲ್ಲಿ ಮುಂಬೈ ವಿರುದ್ಧ ಮೊದಲ ಬಾರಿಗೆ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ತಂಡ ಎಂಬ ದಾಖಲೆ ಪಂಜಾಬ್‌ ಪಾಲಾಯಿತು.
  3. ಪಂಜಾಬ್‌ ಈ ವರೆಗೆ ಐಪಿಎಲ್‌ನಲ್ಲಿ ಎಂಟು ಬಾರಿ 200+ ಮೊತ್ತ ಬೆನ್ನಟ್ಟಿದೆ. ಇದು ಐಪಿಎಲ್‌ನಲ್ಲಿ ತಂಡವೊಂದರ ಅತ್ಯಧಿಕ ಯಶಸ್ವಿ ಚೇಸಿಂಗ್‌ ಆಗಿದೆ.
  4. ಐಪಿಎಲ್ 2025 ರಲ್ಲಿ ಒಂಬತ್ತನೇ ಯಶಸ್ವಿ 200+ ಅನ್ನು ಬೆನ್ನಟ್ಟಲಾಗಿದೆ. ಒಂದೇ ಆವೃತ್ತಿಯಲ್ಲಿ ಕಂಡ ಅತಿ ಹೆಚ್ಚು ಚೇಸಿಂಗ್‌ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮಳೆಯಿಂದ ತಡರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಯ್ಯರ್‌ 41 ಎಸೆತಗಳಲ್ಲಿ ಅಜೇಯ 87 ರನ್‌ ಬಾರಿಸಿದರು. ಈ ಪರಿಣಾಮ ಪಂಜಾವ್‌ ಇನ್ನೊಂದು ಓವರ್‌ ಬಾಕಿ ಇರುವಂತೆಯೇ 5 ವಿಕೆಟ್‌ಗೆ 207 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!