Seetha Rama Serial: ಮತ್ತೆ ಶುರುವಾಗಲಿದೆ ಸೀತಾ ರಾಮ ಧಾರಾವಾಹಿ: ಅಭಿಮಾನಿಗಳಿಗೆ ‘ಸಿಹಿ’ ಸುದ್ದಿ
ತೆರೆಗೆ ಬಂದ ಕೆಲವೇ ದಿನಗಳಲ್ಲಿ ಸೀತಾ ರಾಮ ಸೀರಿಯಲ್ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಧಾರಾವಾಹಿ ಅಂತ್ಯವಾಗಿದೆ. ಈ ಧಾರಾವಾಹಿ ಪೂರ್ಣಗೊಂಡಿರುವುದು ಅಭಿಮಾನಿಗಳಿಗೆ ಬೇಸರ ಕಾಡುತ್ತಿದೆ. ಆದರೆ, ಅಭಿಮಾನಿಗಳಿಗೆ ಖಷಿ ನೀಡುವಂತಹ ಸುದ್ದಿಯೊಂದನ್ನು ಝೀ ಕನ್ನಡ ನೀಡಿದೆ. ಸೀತಾ ರಾಮ ಧಾರಾವಾಹಿಯ ಕೊನೆಯಲ್ಲಿ ಒಂದು ಇಂಟ್ರೆಸ್ಟಿಂಗ್ ಅಪ್ಡೇಟ್ ಸಿಕ್ಕಿದೆ.

Seetha rama 2

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಮೇ 30 ರಂದು ಕೊನೆಯ ಎಸಪಿಸೋಡ್ ಪ್ರಸಾರ ಮಾಡುವ ಮೂಲಕ ಕೊನೆಗೊಂಡಿದೆ. ಬರೋಬ್ಬರಿ 490 ಸಂಚಿಕೆಗಳ ಪ್ರಸಾರ ಕಂಡಿದ್ದ ಸೀತಾ ರಾಮ ಧಾರಾವಾಹಿಗೆ ಶುಭಂ ಬೋರ್ಡ್ ಬಿದ್ದಿದೆ. ಕ್ಲೈಮ್ಯಾಕ್ಸ್ನಲ್ಲಿ ರಾಮನ ತಂದೆ ಇಂದ್ರ ಹಾಗೂ ತಾಯಿ ವಾಣಿಯನ್ನ ಕೊಂದದ್ದು ಭಾರ್ಗವಿ ಎಂದು ಈಕೆಯ ಕರಾಳ ಇತಿಹಾಸ ರಾಮನ ಎದುರು ಬಯಲಾಯಿತು. ಸೀತಾಳನ್ನೂ ಕೊಲ್ಲೋಕೆ ಭಾರ್ಗವಿ ಮುಂದಾಗುತ್ತಾಳೆ. ಅಷ್ಟರಲ್ಲಿ ಭಾರ್ಗವಿ ಅರೆಸ್ಟ್ ಆಗಿ ಜೈಲು ಪಾಲಾಗುತ್ತಾಳೆ. ಇಲ್ಲಿದೆ ಸೀತಾ ರಾಮ ಧಾರಾವಾಹಿಯನ್ನು ಮುಗಿಸಲಾಯಿತು.
ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂದಿತ್ತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭವಾಗಿ ಮುಕ್ತಾಯಕಂಡಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್, ಪೂಜಾ ಲೋಕೇಶ್, ಜಯದೇವ್ ಮೋಹನ್, ಅಶೋಕ್ ಶರ್ಮಾ, ರೀತು ಸಿಂಗ್ ನೇಪಾಳ, ಪೂರ್ಣಚಂದ್ರ ಮುಂತಾದವರು ಭಾಗವಹಿಸಿದ್ದರು.
ತೆರೆಗೆ ಬಂದ ಕೆಲವೇ ದಿನಗಳಲ್ಲಿ ಈ ಸೀರಿಯಲ್ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಧಾರಾವಾಹಿ ಅಂತ್ಯವಾಗಿದೆ. ಈ ಧಾರಾವಾಹಿ ಪೂರ್ಣಗೊಂಡಿರುವುದು ಅಭಿಮಾನಿಗಳಿಗೆ ಬೇಸರ ಕಾಡುತ್ತಿದೆ. ಆದರೆ, ಅಭಿಮಾನಿಗಳಿಗೆ ಖಷಿ ನೀಡುವಂತಹ ಸುದ್ದಿಯೊಂದನ್ನು ಝೀ ಕನ್ನಡ ನೀಡಿದೆ. ಸೀತಾ ರಾಮ ಧಾರಾವಾಹಿಯ ಕೊನೆಯಲ್ಲಿ ಒಂದು ಇಂಟ್ರೆಸ್ಟಿಂಗ್ ಅಪ್ಡೇಟ್ ಸಿಕ್ಕಿದೆ. ಅಂತಿಮ ದೃಶ್ಯದಲ್ಲಿ ಮರಳಿ ಬರಲಿದ್ದಾರೆ ಸೀತಾ ರಾಮ ಎಂದು ತೋರಿಸಲಾಗಿದೆ. ಈ ಕುರಿತು ಪ್ರೊಮೋ ಒಂದನ್ನು ಕೂಡ ಝೀ ಕನ್ನಡ ಹಂಚಿಕೊಂಡಿದೆ. ಹಾಗಾದ್ರೆ, ಸೀತಾ ರಾಮ ಪಾರ್ಟ್ 2 ಬರಲಿದ್ಯಾ? ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡುತ್ತಿದೆ.
ಮುಂದಿನದ ದಿನಗಲ್ಲಿ ಸೀತಾ ರಾಮ ಎರಡನೇ ಪಾರ್ಟ್ ಬರಲಿದೆ ಎಂದು ವಾಹಿನಿ ತಿಳಿಸಿದೆ. ಆದರೆ, ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದು ನೋಡಬೇಕಿದೆ. ಅಲ್ಲದೆ ಈ ಮೊದಲು ಗಟ್ಟಿ ಮೇಳ ಧಾರಾವಾಹಿಯು ಕೊನೆಗೊಂಡಾಗ ಕೂಡ ವಾಹಿನಿ ಈ ಧಾರಾವಾಹಿಗೆ ಮತ್ತೊಂದು ಪಾರ್ಟ್ ಬರಲಿದೆ ಎನ್ನುವ ಸೂಚನೆ ನೀಡಿತ್ತು. ಆದರೆ, ಆ ರೀತಿ ಈವರೆಗೆ ಆಗಿಲ್ಲ. ಈಗ ಸೀತಾ ರಾಮ 2 ಬರುತ್ತೋ, ಬರಲ್ವೋ ಎಂಬ ಗೊಂದಲ ವೀಕ್ಷಕರಲ್ಲಿದೆ.
Seetha Rama: ಸೀತಾ ರಾಮ ಕೊನೆಯ ದಿನದ ಶೂಟಿಂಗ್ನಲ್ಲಿ ಕಣ್ಣೀರಿಟ್ಟ ಗಗನ್ ಚಿನ್ನಪ್ಪ: ವಿಡಿಯೋ ನೋಡಿ