Sunday, 15th December 2024

Vastu Tips: ಮನೆಯೊಳಗಿನ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ ಕರ್ಪೂರ

Vastu Tips

ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿ ಹೆಚ್ಚಿನವರು ಹಗಲು ರಾತ್ರಿಯೆನ್ನದೆ ದುಡಿಯುತ್ತಾರೆ. ಆದರೆ ಎಷ್ಟು ದುಡಿದರೂ ಕೈಗೆ ಹಣ (Money problem) ಸರಿಯಾಗಿ ಬರುವುದಿಲ್ಲ, ಬಂದರೂ ಉಳಿಯುವುದಿಲ್ಲ. ಯಶಸ್ಸು (Success) ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಕೊರಗುತ್ತಾರೆ. ಆದರೆ ಇದಕ್ಕೆ ಮನೆಯ ವಾಸ್ತು ಅಂಶಗಳು (Vastu Tips) ಕಾರಣ ಎಂಬುದನ್ನು ಮರೆಯುತ್ತಾರೆ.

ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಹಣ ಪಡೆಯಲು ಬಯಸುವವರು ಮನೆಯ ವಾಸ್ತುವಿನ ವಿಚಾರದಲ್ಲೂ ಗಮನ ಹರಿಸಬೇಕು. ಕೆಲವೊಮ್ಮೆ ನಾವು ಮಾಡುವ ಸಣ್ಣಪುಟ್ಟ ಕಾರ್ಯಗಳು ಇಂತಹ ವಾಸ್ತು ದೋಷವನ್ನು ದೂರ ಮಾಡುತ್ತದೆ.

ಸಾಮಾನ್ಯವಾಗಿ ಕರ್ಪೂರವನ್ನು ನಾವು ಪೂಜಾ ಕಾರ್ಯಗಳಿಗೆ ಬಳಸುತ್ತೇವೆ. ಆದರೆ ಈ ಕರ್ಪೂರವು ಜೀವನದಲ್ಲಿ ಸಂತೋಷ, ಸಮೃದ್ಧಿ ತರುತ್ತದೆ ಮತ್ತು ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಕರ್ಪೂರದಿಂದ ಮಾಡುವ ಕೆಲವು ಸರಳ ವಿಧಾನಗಳು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಜೀವನದಲ್ಲಿ ಯಶಸ್ಸನ್ನು ತರುತ್ತದೆ. ಅಂತಹ ವಿಧಾನಗಳ ಕುರಿತು ಇಲ್ಲಿದೆ ಮಾಹಿತಿ.

Vastu Tips

ಗುಲಾಬಿ

ಗುಲಾಬಿ ಹೂವಿನಲ್ಲಿ ಕರ್ಪೂರದ ತುಂಡನ್ನು ಇರಿಸಿ ಸಂಜೆ ಕರ್ಪೂರವನ್ನು ಬೆಳಗಿಸಿ ಮಾ ದುರ್ಗೆಗೆ ಅರ್ಪಿಸಿ. ಇದರಿಂದ ಮನೆಯಲ್ಲಿನ ಹಣಕಾಸಿನ ತೊಂದರೆ ಶೀಘ್ರದಲ್ಲಿ ದೂರವಾಗುತ್ತದೆ. ಕೈಗೆ ಬರಲು ವಿಳಂಬವಾಗುತ್ತಿರುವ ಹಣವು ಬಹುಬೇಗನೆ ಮರಳಿ ಬರುತ್ತದೆ.

Vastu Tips

ಲವಂಗ

ರಾತ್ರಿ ಅಡುಗೆ ಕೆಲಸ ಮಾಡಿದ ಅನಂತರ, ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ. ಇದನ್ನು ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ತರುತ್ತದೆ.

ಪೂಜಾ ಕೋಣೆ

ಪೂಜಾ ಕೋಣೆಯಲ್ಲಿ ಯಾವಾಗಲೂ ಕರ್ಪೂರದ ಮಾತ್ರೆ ಇರಿಸಿಕೊಳ್ಳಿ. ಅದು ಮುಗಿದ ಅನಂತರ ಬದಲಾಯಿಸಿ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯಿಂದ ದೂರವಾಗುತ್ತದೆ. ಮನೆಯಲ್ಲಿರುವ ವಾಸ್ತು ದೋಷಗಳನ್ನು ಸರಿಪಡಿಸುತ್ತದೆ.

ಪಲಾವ್ ಎಲೆ

ಪಲಾವ್ ಎಲೆಗಳೊಂದಿಗೆ ಕರ್ಪೂರವನ್ನು ಸುಟ್ಟರೆ ಅದು ತುಂಬಾ ಮಂಗಳಕರ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಅಥವಾ ನಿಮಗೆ ಇರುವ ಸಮಸ್ಯೆಯನ್ನು ಅದರಲ್ಲಿ ಬರೆದು ಸುಟ್ಟು ಹಾಕಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಪಲಾವ್ ಎಲೆಗಳನ್ನು ಕರ್ಪೂರದೊಂದಿಗೆ ಸುಟ್ಟರೆ ಅದು ಗಾಳಿಯಲ್ಲಿರುವ ಅನೇಕ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕಿ ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಪರಿಸರವನ್ನು ಸ್ವಚ್ಛಗೊಳಿಸುತ್ತದೆ.

Spider: 118 ವರ್ಷಗಳ ಬಳಿಕ ಜೇಡಗಳ ಎರಡು ಹೊಸ ಪ್ರಭೇದ ಪತ್ತೆ!

ದಾಲ್ಚಿನ್ನಿ

ಕರ್ಪೂರದೊಂದಿಗೆ ದಾಲ್ಚಿನ್ನಿಯನ್ನು ಸುಟ್ಟರೆ ಮನೆಯಲ್ಲಿರುವ ಅಡಚಣೆಗಳು ದೂರವಾಗುತ್ತದೆ. ಕರ್ಪೂರ ಮತ್ತು ದಾಲ್ಚಿನ್ನಿ ಸೂರ್ಯ ಮತ್ತು ಚಂದ್ರನ ಶಕ್ತಿಗಳಿಗೆ ಸಂಬಂಧಿಸಿದೆ ಎನ್ನಲಾಗುತ್ತದೆ. ಸೂರ್ಯನು ಚೈತನ್ಯ, ಶಕ್ತಿ ಮತ್ತು ಸಕಾರಾತ್ಮಕತೆಯೊಂದಿಗೆ ಸಂಬಂಧ ಹೊಂದಿದ್ದು, ಚಂದ್ರನು ಭಾವನೆಗಳನ್ನು ಪ್ರತಿನಿಧಿಸುತ್ತಾನೆ. ಕರ್ಪೂರ ಮತ್ತು ದಾಲ್ಚಿನ್ನಿ ಒಟ್ಟಿಗೆ ಸುಡುವುದು ಈ ಶಕ್ತಿಗಳನ್ನು ಸಮತೋಲನಕ್ಕೆ ಸಹಾಯ ಮಾಡುತ್ತದೆ.