Thursday, 19th September 2024

Vastu Tips: ಪರ್ಫ್ಯೂಮ್‌ ಗಿಫ್ಟ್‌ ಕೊಡಬಾರದು; ಅದಕ್ಕೂ ಒಂದು ಕಾರಣವಿದೆ ಗೊತ್ತಾ?

perfume

ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರು, ಸಂಬಂಧಿಗಳಿಗೆ ಉಡುಗೊರೆ (Gift) ಕೊಡುವುದು ವಾಡಿಕೆ. ಉಡುಗೊರೆ ನೀಡಬೇಕಾದ ಸಮುಯದಲ್ಲಿ ನಾವು ಸಾಕಷ್ಟು ಯೋಚಿಸುತ್ತೇವೆ.. ಮುಖ್ಯವಾಗಿ ಅವರಿಗೆ ಏನು ಇಷ್ಟ ಆಗಬಹುದು ಎಂಬುದನ್ನು. ಆದರೆ ಉಡುಗೊರೆಗಳನ್ನು ನೀಡುವಾಗ ಇಷ್ಟವನ್ನಲ್ಲ ವಾಸ್ತು ಅಂಶಗಳನ್ನು (Vastu Tips) ಪರಿಗಣಿಸಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಖ್ಯಾತ ವಾಸ್ತು ತಜ್ಞರಾದ ಪೂಜಾ ಭಲ್ಲಾ ಅವರು ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಉಡುಗೊರೆ ನೀಡುವಾಗ ಈ ಒಂದು ವಸ್ತುವನ್ನು ನೀಡಬಾರದು ಎಂದು ಹೇಳಿದ್ದಾರೆ.
ಎಂದಿಗೂ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಬೇಡಿ ಎಂದು ಅವರು ಹೇಳಿದ್ದು ಮಾತ್ರವಲ್ಲ ಇದರಿಂದ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

Vastu Tips

ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡುವುದರಿಂದ ಸಂಬಂಧಗಳು ಮತ್ತು ವೈಯಕ್ತಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೂಜಾ ಭಲ್ಲಾ. ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಮತ್ತು ಸಂಬಂಧದಲ್ಲಿ ಶುಕ್ರ ಗ್ರಹದ ಶಕ್ತಿ ದುರ್ಬಲವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ಐಷಾರಾಮಿ, ಪ್ರೀತಿ ಮತ್ತು ಸೌಕರ್ಯದೊಂದಿಗೆ ಸಂಪರ್ಕ ಹೊಂದಿದೆ. ಯಾರಿಗಾದರೂ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಿದರೆ ನಿಮ್ಮ ಬದುಕಿನಲ್ಲಿ ಶುಕ್ರನ ಸ್ಥಾನ ಕಡಿಮೆಯಾಗಿ ಕೆಲವು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು. ಹೀಗಾಗಿ ಸುಗಂಧ ದ್ರವ್ಯವನ್ನು ಉಡುಗೊರೆಯನ್ನು ನೀಡುವವರು ಮತ್ತು ಸ್ವೀಕರಿಸುವವರ ಮೇಲೆ ಇದು ಬಲವಾದ ಪರಿಣಾಮ ಬೀರುತ್ತದೆ.

ಭಲ್ಲಾ ಅವರ ಪ್ರಕಾರ, ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡುವುದರಿಂದ ಉಡುಗೊರೆ ಸ್ವೀಕರಿಸುವ ವ್ಯಕ್ತಿಯೊಂದಿಗಿನ ನಿಮ್ಮ ಸಂಬಂಧ ನಾಶವಾಗಬಹುದು ಎಂದು ಎಚ್ಚರಿಸಿದ್ದಾರೆ.

ಅಂತಹ ಉಡುಗೊರೆಯು ಶುಕ್ರನ ಸಕಾರಾತ್ಮಕ ಶಕ್ತಿಗಳಿಗೆ ವಿರುದ್ಧವಾಗಿ ಚಲಿಸುತ್ತದೆ. ವಾಸ್ತು ಅದನ್ನು ನೋಡುತ್ತದೆ. ಇದು ಅಂತಿಮವಾಗಿ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ.

Vastu Tips

ಸುಗಂಧ ದ್ರವ್ಯಗಳು ಹೆಚ್ಚಾಗಿ ಬಳಸುವ ಅಭ್ಯಾಸವೂ ಒಳ್ಳೆಯದಲ್ಲ ಎನ್ನುತ್ತಾರೆ ಪೂಜಾ ಭಲ್ಲಾ. ಯಾಕೆಂದರೆ ಇಂತಹ ಅಭ್ಯಾಸವು ಜೀವನದಲ್ಲಿ ಹೆಚ್ಚು ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ.

ದುರ್ಬಲಗೊಂಡ ಶುಕ್ರ ಪ್ರಭಾವವು ಸಂಬಂಧಗಳ ಮೇಲೆ ಮಾತ್ರವಲ್ಲದೆ ಆರ್ಥಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತದೆ. ಶುಕ್ರವು ಸಮೃದ್ಧಿ ಮತ್ತು ಸಂತೋಷದೊಂದಿಗೆ ಸಂಬಂಧಿಸಿದೆ. ಇದು ದುರ್ಬಲಗೊಳ್ಳುವುದರಿಂದ ಈ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು ಎನ್ನುತ್ತಾರೆ ಅವರು.

Vastu Tips: ನಿದ್ರೆಯ ಗುಣಮಟ್ಟ ಹೆಚ್ಚಿಸಲು ವಾಸ್ತು ಶಾಸ್ತ್ರದಲ್ಲಿ ಏನಿದೆ ಉಪಾಯ?

ಸಾಮಾನ್ಯವಾಗಿ ಉಡುಗೊರೆಗಳು ನೀಡುವುದರಿಂದ ಏನೂ ತೊಂದರೆಯಿಲ್ಲ ಎಂಬುದು ಎಲ್ಲರ ಭಾವನೆ. ಆದರೆ ವಾಸ್ತು ಶಾಸ್ತ್ರವು ಇದಕ್ಕಾಗಿಯೂ ನಿಯಮಗಳನ್ನು ಹೊಂದಿದೆ. ಹೀಗಾಗಿ ಉಡುಗೊರೆಗಳನ್ನು ನೀಡುವಾಗ ಸಕಾರಾತ್ಮಕತೆಯ ಶಕ್ತಿಯ ತತ್ತ್ವ ಗಳೊಂದಿಗೆ ಹೊಂದಿಕೆಯಾಗುವ ಉಡುಗೊರೆಗಳನ್ನು ಆಯ್ಕೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಪೂಜಾ.

ಸಂಬಂಧಗಳು ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಉಡುಗೊರೆಗಳನ್ನು ಆಯ್ಕೆ ಮಾಡುವುದು ಸರಿಯಲ್ಲ. ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳ ಹರಿವಿನ ಮೇಲೆ ವ್ಯತ್ಯಾಸ ಬೀರುವ ಅಂಶಗಳನ್ನು ಗಮನಿಸಬೇಕು. ಸಾಮರಸ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಉಡುಗೊರೆಗಳ ಆಯ್ಕೆ ಉತ್ತಮ ಎನ್ನುತ್ತಾರೆ ಪೂಜಾ ಭಲ್ಲಾ.

Leave a Reply

Your email address will not be published. Required fields are marked *