ಶಿರಸಿ :
ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿ ಪಾಲನೆ ಮಾಡುವ ಒರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನೊಪ್ಪಿದ ಭೀಕರ ಘಟನೆ ಕಲಘಟಗಿ ಹಳಿಯಾಳ ರಸ್ತೆ ಜನಗಾ ಕ್ರಾಸನಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಹಿರೇಹಟ್ಟಿ ಗ್ರಾಮದ ನಿವಾಸಿಯಾದ ಶೋಭಾ ಯಲ್ಲಪ್ಪಾ ಕರಿಗಾರ (೨೬) ಮೃತ ಮಹಿಳೆಯಾಗಿದ್ದಾಳೆ. ರಸ್ತೆ ಬದಿಯಲ್ಲಿ ಕುರಿ ನಡೆಸಿಕೊಂಡು ಹೋಗುತ್ತಿದ್ದಾಗ ಕಲಘಟಗಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಲಾರಿ ( ಕೆಎ ೩೦, ೮೫೪೪ ) ತಿರುವಿನಲ್ಲಿ ಕುರಿ ಮತ್ತು ಕುರಿ ನಡೆಸಿಕೊಂಡು ಬರುತ್ತಿದ್ದ ಮಹಿಳೆ ಮೇಲೆ ಹತ್ತಿದೆ.
ಸಿ.ಪಿಐ ಬಿ.ಎಸ್.ಲೋಕಾಪುರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.