Thursday, 21st November 2024

Air India : ಏರ್ ಇಂಡಿಯಾ ಊಟದಲ್ಲಿ ಜಿರಳೆ ಪತ್ತೆ; ಪ್ರಯಾಣಿಕನ ಪ್ರಶ್ನೆಗೆ ಸಂಸ್ಥೆ ಕೊಟ್ಟ ಉತ್ತರವೇನು?

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ (Air India) ವಿಮಾನದಲ್ಲಿ ನೀಡಲಾದ ಆಮ್ಲೆಟ್‌ನಲ್ಲಿ (Air India Food) ಜಿರಳೆ ಪತ್ತೆಯಾಗಿದೆ. ಈ ಬಗ್ಗೆ ಏರ್ ಇಂಡಿಯಾ ಪ್ರಯಾಣಿಕರೊಬ್ಬರು ನೀಡಿದ ದೂರನ್ನು ಪರಿಗಣಿಸಿ ಕ್ಯಾಟರಿಂಗ್ ಸೇವಾ ಪೂರೈಕೆದಾರರ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ಸೆಪ್ಟೆಂಬರ್ 17, 2024 ರಂದು ಡೆಲ್ಲಿಯಿಂದ ನ್ಯೂಯಾರ್ಕ್‌ಗೆ ಹೋಗುತ್ತಿದ್ದ ಎಐ 101ರ ವಿಮಾನದಲ್ಲಿನೀಡಲಾದ ಊಟದಲ್ಲಿ (Air India Meal) ಸಿಕ್ಕ ಜಿರಳೆ ಬಗ್ಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನೀಡಲಾಗುವ ಆಮ್ಲೆಟ್‌ನಲ್ಲಿ ಜಿರಳೆ ಕಂಡುಬಂದಿದೆ ಎಂದು ಪ್ರಯಾಣಿಕರು ಮಾಡಿರುವ ಪೋಸ್ಟ್‌ ಈ ರೀತಿ ಇದೆ.

ನಾವು ಜಿರಳೆಯನ್ನು ನೋಡಿದಾಗ ನನ್ನ 2 ವರ್ಷದ ಮಗು ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವನ್ನು ತಿಂದು ಮುಗಿಸಿತ್ತು. ಇದರ ಪರಿಣಾಮವಾಗಿ ಹೊಟ್ಟೆ ನೋವನಿಂದ ಬಳಲಿದೆ ಎಂದು ಅವರು ವರದಿ ಮಾಡಿದ್ದಾರೆ. ಆ ಪ್ರಯಾಣೀನಿ ವಿಮಾನದಲ್ಲಿ ನೀಡಿದ ಆಹಾರ ಪದಾರ್ಥಗಳ ಸಣ್ಣ ವೀಡಿಯೊ ಮತ್ತು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾ, ವಾಯುಯಾನ ನಿಯಂತ್ರಕ ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ ರಾಮ್ ಮೋಹನ್ ನಾಯ್ಡು ಅವರಿಗೆ ಈ ಫೋಟೊಗಳನ್ನು ಟ್ಯಾಗ್ ಮಾಡಿದ್ದಾರೆ. ಗ್ರಾಹಕರ ಅನುಭವದ ಬಗ್ಗೆ ವಿಮಾನಯಾನ ಸಂಸ್ಥೆ ಕಾಳಜಿ ವಹಿಸಿದೆ. ಹೆಚ್ಚಿನ ತನಿಖೆಗಾಗಿ ಕ್ಯಾಟರಿಂಗ್ ಸೇವಾ ಪೂರೈಕೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi : ಸರ್ಜಿಕಲ್ ಸ್ಟ್ರೈಕ್‌ನಿಂದ ಉಗ್ರ ಪೋಷಕರಿಗೆ ಆಘಾತವಾಗಿದೆ; ಮೋದಿ ಲೇವಡಿ

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ. ಏರ್ ಇಂಡಿಯಾ ಜಾಗತಿಕವಾಗಿ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಆಹಾರ ಸರಬರಾಜು ಮಾಡುವ ಅಡುಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಊಟದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಕಠಿಣ ಎಸ್ಒಪಿಗಳು ಮತ್ತು ಅನೇಕ ತಪಾಸಣೆಗಳನ್ನು ಮಾಡಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.