Vidyapati Movie: ಸದ್ದಿಲ್ಲದೆ ಒಟಿಟಿಗೆ ಬಂದ ʼವಿದ್ಯಾಪತಿʼ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿ ಬಂದಿರುವ ʼವಿದ್ಯಾಪತಿʼ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಹಾಗಾಗಿ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಮನೆ ಮಂದಿ ಜತೆ ಕುಳಿತು ಫ್ಯಾಮಿಲಿ ಎಂಟರ್‌ಟೈನರ್ ʼವಿದ್ಯಾಪತಿʼ ಚಿತ್ರ ನೋಡಬಹುದು.

Vidyapati Movie

ಬೆಂಗಳೂರು: ಡಾಲಿ ಧನಂಜಯ್ ನಿರ್ಮಿಸಿರುವ 'ವಿದ್ಯಾಪತಿ' (Vidyapati Movie) ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಡಾಲಿ ಅವರ ಗೆಳೆಯ ನಾಗಭೂಷಣ್ (Nagabhushana) ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ʼಉಪಾಧ್ಯಕ್ಷʼ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ ನಟಿಸಿದ್ದಾರೆ. ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಹುತೇಕ ಥಿಯೇಟರ್‌ಗಳಲ್ಲಿ ತನ್ನ ಪ್ರದರ್ಶನ ಮುಗಿಸಿದ ಬಳಿಕ ಇದೀಗ ಚಿತ್ರ ಒಟಿಟಿಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದೆ. ಸಿದ್ದು ಪಾತ್ರದ ಮೂಲಕ ನಾಗಭೂಷಣ್ ಗಮನ ಸೆಳೆದಿದ್ದಾರೆ. ಸಿನಿಮಾ ಕೊನೆವರೆಗೂ ಇವರ ಪಾತ್ರವೇ ಹೈಲೈಟ್ ಆಗಿದೆ.
ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿಬಂದಿದ್ದ ʼವಿದ್ಯಾಪತಿʼ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಹಾಗಾಗಿ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಮನೆ ಮಂದಿಯೊಂದಿಗೆ ಕುಳಿತು ಫ್ಯಾಮಿಲಿ ಎಂಟರ್‌ಟೈನರ್ ʼವಿದ್ಯಾಪತಿʼ ಚಿತ್ರ ನೋಡಬಹುದು. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡಿರುವ 4ನೇ ಚಿತ್ರ ಇದಾಗಿದೆ.
ಇದನ್ನು ಓದಿ: Kannada New Movie: ಹೊಸಕಥೆ ಆಧಾರಿತ ʼದಿʼ ಚಿತ್ರ ಮೇ 16ರಂದು ತೆರೆಗೆ
ʼʼಇದು ಅವನ ಯುದ್ಧ, ಅವನೇ ಹೋರಾಡಬೇಕುʼʼ ಇದು ಚಿತ್ರದಲ್ಲಿ ಡಾಲಿ ಧನಂಜಯ್ ಹೇಳುವ ಡೈಲಾಗ್. ಇಡೀ ಚಿತ್ರದ ಕಥೆ ಏನು ಎಂಬುದನ್ನು ಈ ಸಂಭಾಷಣೆ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಪರಿತಪಿಸುವ ಬದಲು ಹೋರಾಡಬೇಕು. ಐದೇಟು ಹೊಡೆದಾಗ ಸುಮ್ಮನೆ ಇರುವ ಬದಲು ಒಂದಾದರೂ ಏಟನ್ನು ಹೊಡೆಯಬೇಕು ಎಂಬುದು ‘ವಿದ್ಯಾಪತಿ’ ಚಿತ್ರದ ಮುಖ್ಯ ಸಾರಾಂಶ.
ನಾಗಭೂಷಣ್-ಮಲೈಕಾ ಜತೆಗೆ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ʼವಿದ್ಯಾಪತಿ’ ಚಿತ್ರಕ್ಕೆ ಕಥೆ ಬರೆದು, ಸಂಕಲನವನ್ನೂ ಇಶಾಂ ಹಾಗೂ ಹಸೀಂ ಖಾನ್ ಅವರು ಮಾಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಮಾಸ್ಟರ್ ಅವರ ಸಾಹಸ ನಿರ್ದೇಶನವಿದೆ.