Viral News: ಬುದ್ದಿ ಹೇಳಬೇಕಿದ್ದ ಗುರುವಿನಿಂದಲೇ ನೀಚ ಕೃತ್ಯ! ವಿದ್ಯಾರ್ಥಿಗಳ ಜೊತೆ ಗುಂಡು ಹಾಕಿದ ಶಿಕ್ಷಕ; ವಿಡಿಯೊ ಇದೆ
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್ ತನ್ನ ವಿದ್ಯಾರ್ಥಿಗಳಿಗೆ ಮದ್ಯ ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನಂತರ ಅವನನ್ನು ಅಮಾನತುಗೊಳಿಸಲಾಗಿದೆಯಂತೆ.


ಭೋಪಾಲ್: ಇತ್ತೀಚೆಗಷ್ಟೇ ವೈದ್ಯನೊಬ್ಬ 4 ವರ್ಷದ ಬಾಲಕನಿಗೆ ಧೂಮಪಾನ ಮಾಡುವುದನ್ನು ಹೇಳಿಕೊಟ್ಟ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು., ಇದೀಗ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಮದ್ಯ ಸೇವಿಸಲು ಹೇಳಿಕೊಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗುತ್ತಿದೆ. ಸದ್ಯ ಈ ಕಿಡಿಗೇಡಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆಯಂತೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರ್ವಾರಾ ಬ್ಲಾಕ್‍ನ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್ ಇಂತಹ ಕೃತ್ಯ ಎಸಗಿದ್ದಾನೆ. ಅವನ ಈ ದುಷ್ಕೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಆತ ಚಿಕ್ಕ ವಿದ್ಯಾರ್ಥಿಗಳಿಗೆ ಕೋಣೆಯಲ್ಲಿ ಕಪ್‍ಗಳಲ್ಲಿ ಮದ್ಯಪಾನವನ್ನು ನೀಡುವುದು ಮತ್ತು ಪಾನೀಯವನ್ನು ಸೇವಿಸುವ ಮೊದಲು ನೀರನ್ನು ಬೆರೆಸುವಂತೆ ಅವರಲ್ಲಿ ಒಬ್ಬರಿಗೆ ಹೇಳುವುದು ರೆಕಾರ್ಡ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
मध्य प्रदेश : कटनी में शिक्षक ने बच्चों को पिलाई शराब#Katni #Teacher #latestnews pic.twitter.com/RzvU8I50oS
— Bharat Raftar TV (@BharatRaftarTV) April 19, 2025
ಈ ವಿಡಿಯೊ ವೈರಲ್ ಆದ ನಂತರ ವಿಡಿಯೊವನ್ನು ಗಮನಿಸಿದ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ ಒಪಿ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದಾರೆ. ದುರ್ನಡತೆ, ಮಕ್ಕಳನ್ನು ಮದ್ಯಪಾನ ಮಾಡಲು ಪ್ರೋತ್ಸಾಹಿಸುವುದು ಮತ್ತು ಶಿಕ್ಷಕರ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಸಿಂಗ್ ಅವನನ್ನು ಮಧ್ಯಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳ ಅಡಿಯಲ್ಲಿ ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ವೈದ್ಯನೊಬ್ಬ ಸಣ್ಣ ಬಾಲಕನಿಗೆ ಸಿಗರೇಟ್ ಸೇದುವುದು ಹೇಗೆ ಎಂದು ಕಲಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆ ಉತ್ತರ ಪ್ರದೇಶದ ಜಲೌನ್‍ನಲ್ಲಿ ನಡೆದಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಸಿಗರೇಟಿನ ಹೊಗೆಯನ್ನು ಉಸಿರಾಡುವಂತೆ ಮಾಡುವ ಮೂಲಕ ಬಾಲಕನ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ವೈದ್ಯ ಹೇಳಿದ್ದಾನೆ.
ಇಂತಹ ದುಷ್ಕೃತ್ಯ ಎಸಗಿದ ವೈದ್ಯನನ್ನು ಡಾ.ಸುರೇಶ್ ಚಂದ್ರ ಎಂದು ಗುರುತಿಸಲಾಗಿದೆ. ಜಲೌನ್‍ನಲ್ಲಿರುವ ಕುಥೌಂಡ್‍ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‍ಸಿ)ಈ ವೈದ್ಯನನ್ನು ನಿಯೋಜಿಸಲಾಗಿತ್ತು. ಈ ಘಟನೆಯ ನಂತರ ಸಿಎಂಒ ಎನ್.ಡಿ.ಶರ್ಮಾ ಈ ಘಟನೆಯ ವಿವರಗಳೊಂದಿಗೆ ವರದಿಯನ್ನು ಆಡಳಿತಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ಆರೋಪಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಎಸಿಎಂಒಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದಾಗ ವೈದ್ಯನು ಮದ್ಯದ ಅಮಲಿನಲ್ಲಿದ್ದನು ಎಂದು ವರದಿಗಳಲ್ಲಿ ತಿಳಿಸಲಾಗಿದೆ.