Thursday, 12th December 2024

Viral News: 30 ಲಕ್ಷ ಪ್ಯಾಕೇಜ್, ಮೂರು ಬೆಡ್ ರೂಮ್ ಮನೆ! ವರನಿಗಾಗಿ ವಿಚ್ಛೇದಿತ ಮಹಿಳೆಯ ಡಿಮ್ಯಾಂಡ್

Viral News

ವಿಚ್ಚೇದಿತ ಮಹಿಳೆಯೊಬ್ಬಳು (divorced woman) ನೀಡಿರುವ ಮದುವೆಯ ಜಾಹೀರಾತೊಂದು (Marriage advertisement) ಈಗ ಸಾಮಾಜಿಕ ಜಾಲತಾಣದಲ್ಲಿ (social media) ಭಾರಿ ವೈರಲ್ (Viral News) ಆಗಿದೆ. ತಿಂಗಳಿಗೆ 11 ಸಾವಿರ ರೂ. ಗಳಿಸುವ ಮಹಿಳೆಯು ಹಲವು ಬೇಡಿಕೆಗಳೊಂದಿಗೆ 30ರಿಂದ 80 ಲಕ್ಷ ರೂ. ಪ್ಯಾಕೇಜ್ ಇರುವ ವರನನ್ನು (groom) ಬಯಸಿದ್ದು ಚರ್ಚೆಗೆ ಕಾರಣವಾಗಿದೆ.

ಮಹಿಳೆಯು ತನ್ನ ಸಂಪೂರ್ಣ ಪ್ರೊಫೈಲ್ ಅನ್ನು ಹಂಚಿಕೊಂಡಿದ್ದು ಜೊತೆಗೆ ತಾನು ಮದುವೆಯಾಗ ಬಯಸುವ ವರನಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ಹೇಳಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿರುವುದು ಮಾತ್ರವಲ್ಲ ಚರ್ಚೆಗಳನ್ನು ಹುಟ್ಟುಹಾಕಿದೆ.

ಮಹಿಳೆಯ ಪ್ರೊಫೈಲ್ ಆದಾಯದ ನಿರೀಕ್ಷೆಗಳಿಂದ ಹಿಡಿದು ಜೀವನಶೈಲಿಯ ಆದ್ಯತೆಗಳವರೆಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾಳೆ. ಇದು ಕೆಲವು ನಿರ್ದಿಷ್ಟ ಮಾನದಂಡಗಳನ್ನು ಒಳಗೊಂಡಿದೆ. ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಆದಾಯವಿರುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆಯು ಭಾರತ, ಯುಎಸ್ ಅಥವಾ ಯುರೋಪ್‌ನಲ್ಲಿ ನೆಲೆಸಿರುವ ಸಂಗಾತಿಯನ್ನು ಬಯಸಿದ್ದಾಳೆ. ಅದರಲ್ಲೂ ಆತನಿಗೆ ಭಾರತದಲ್ಲಿ ವಾಸಿಸುವವನಾದರೆ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಒಂದು ವೇಳೆ ಅನಿವಾಸಿ ಭಾರತೀಯನಾದರೆ ವರ್ಷಕ್ಕೆ ಸುಮಾರು 80 ಲಕ್ಷ ರೂ. ವೇತನವಿರುವ ಸಂಗಾತಿ ಬೇಕೆಂದು ಆಶಿಸಿದ್ದಾಳೆ. ಅಲ್ಲದೇ ಪ್ರಯಾಣದ ವೇಳೆ ಪಂಚತಾರಾ ಹೊಟೇಲ್ ಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾಳೆ.

ಜೀವನಶೈಲಿಯ ಪ್ರಮುಖ ಆದ್ಯತೆಗಳ ಜೊತೆಗೆ ತನ್ನ ಭವಿಷ್ಯದ ಸಂಗಾತಿಯು ಕನಿಷ್ಠ 3 ಬೆಡ್ ರೂಮ್ ನ ಸ್ವಂತ ಮನೆಯನ್ನು ಹೊಂದಿರಬೇಕು. ಅಲ್ಲಿ ತನ್ನ ಮೇಲೆ ಅವಲಂಬಿತವಾಗಿರುವ ಪೋಷಕರು ಸಹ ವಾಸಿಸಬಹುದು ಎಂದು ಹೇಳಿದ್ದಾಳೆ.

ಕೆಲಸದ ಕಾರಣದಿಂದಾಗಿ ಮನೆಕೆಲಸಗಳನ್ನು ನಿಭಾಯಿಸುವುದಿಲ್ಲ ಮತ್ತು ಅಡುಗೆಯವರು, ಮನೆ ಕೆಲಸಕ್ಕೆ ಜನ ಇರುವವರನ್ನು ನಿರೀಕ್ಷಿವುದಾಗಿ ಹೇಳಿದ್ದಾಳೆ. ಅಲ್ಲದೇ ಅತ್ತೆಯಿಂದ ಪ್ರತ್ಯೇಕವಾಗಿ ವಾಸಿಸುವ ಆದ್ಯತೆಯನ್ನು ವ್ಯಕ್ತಪಡಿಸಿದ್ದಾಳೆ. ಶಿಕ್ಷಣ ಮತ್ತು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಎಂಬಿಎ ಅಥವಾ ಎಂಎಸ್ ಹೊಂದಿರುವ ವರ ಬೇಕಾಗಿದ್ದಾನೆ ಎಂದು ತಿಳಿಸಿದ್ದಾಳೆ.

ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ಮಹಿಳೆಯ ಪ್ರೊಫೈಲ್ ಸಾಕಷ್ಟು ಮಂದಿಯ ಗಮನವನ್ನು ಸೆಳೆದಿದೆ. ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, ಅವಳು ವಿಚ್ಛೇದನ ಹೊಂದಿದ್ದರೂ ಅವಿವಾಹಿತ ವ್ಯಕ್ತಿಯನ್ನು ಬಯಸುತ್ತಿದ್ದಾಳೆ. ಆಕೆಯ ಪೋಷಕರು ಅವಳೊಂದಿಗೆ ಇರಬಹುದು ಆದರೆ ಅತ್ತೆ, ಮಾವ ಅಲ್ಲ. ತಿಂಗಳಿಗೆ 11,000 ಪಡೆಯುತ್ತಾಳೆ. ಇದು ನಗರ ಪ್ರದೇಶಗಳಲ್ಲಿ ಸೇವಕಿಯ ಸಂಬಳಕ್ಕೆ ಸಮಾನವಾಗಿರುತ್ತದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ವರ್ಷಕ್ಕೆ 1,32,000 ಸಂಬಳ ಪಡೆಯುವ ಅವಳು 5 ಸ್ಟಾರ್ ಹೊಟೇಲ್ ಬಯಸುತ್ತಾಳೆ ಎಂದು ಹೇಳಿದ್ದಾರೆ.

ಇನ್ನೊಬ್ಬರು, ಅವಳು ತಾನು ಅತ್ತೆಯೊಂದಿಗೆ ನಿಲ್ಲಲು ಸಾಧ್ಯವಿಲ್ಲ. ಆದರೆ ಬಡ ವ್ಯಕ್ತಿ ಅವಳೊಂದಿಗೆ ಇರಬೇಕೆಂದು ಬಯಸುತ್ತಾಳೆ. ತಿಂಗಳಿಗೆ 11 ಗಳಿಸುವವಳು ಪೂರ್ಣ ಸಮಯದ ಸೇವಕಿ ಮತ್ತು ಅಡುಗೆಯವರನ್ನು ಬಯಸುತ್ತಿದ್ದಾಳೆ, ಮುಂದಿನ ಆದ್ಯತೆಗಳು ಏನಿರಬಹುದು ಎಂದು ಪ್ರಶ್ನಿಸಿದ್ದಾರೆ.

Viral Video: ಹಾಡಹಗಲೇ ಬಾಲಕಿಯನ್ನು ರಸ್ತೆಯ ಮೇಲೆ ಎಳೆದೊಯ್ದ ದರೋಡೆಕೋರರು; ಪಂಜಾಬ್ ಪೊಲೀಸರು ಮಾಡಿದ್ದೇನು?

ಮತ್ತೊಬ್ಬರು, ಇತ್ತೀಚಿನ ದಿನಗಳಲ್ಲಿ ಮದುವೆಗಳು ವ್ಯಾಪಾರ ಒಪ್ಪಂದದಂತೆ ಆಗುತ್ತಿವೆ ಎಂದು ಹೇಳಿದರೆ, ಇನ್ನೊಬ್ಬರು ಅವಳು ತುಂಬಾ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ಇದುವರೆಗೆ 1 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.