Thursday, 12th December 2024

Viral News: ಇನ್‌ಕಮ್ ಸರ್ಟಿಫಿಕೇಟ್‌ನಲ್ಲಿ 2 ರೂ. ಮುದ್ರಣ; ಅಧಿಕಾರಿಯ ತಪ್ಪಿಗೆ ಬಡ ಕುಟುಂಬದ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್‌ ನಷ್ಟ!

Viral News

ಮಧ್ಯಪ್ರದೇಶ: ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಆದಾಯ ಪ್ರಮಾಣ ಪತ್ರದಲ್ಲಅಧಿಕಾರಿಯೊಬ್ಬರು ತಪ್ಪು ಮಾಡಿದ ಕಾರಣ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಯೊಬ್ಬನಿಗೆ ಸ್ಕಾಲರ್‌ಶಿಪ್‌ ನಷ್ಟವಾದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಷಯ ದೊಡ್ಡದಾದ ಬಳಿಕ ಅಧಿಕಾರಿ ತಪ್ಪು ಸರಿಪಡಿಸಿ ಸೂಕ್ತ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ. ಐದು ಸದಸ್ಯರನ್ನು ಒಳಗೊಂಡ ಈ ಕುಟುಂಬವು ವಾರ್ಷಿಕ ಕೇವಲ 2 ರೂಪಾಯಿಗಳನ್ನು ಸಂಪಾದಿಸುತ್ತಿದೆ ಎಂದರೆ ಆಶ್ಚರ್ಯವಾಗುವುದು ಖಂಡಿತ. ಅಂತಹ ಕಡಿಮೆ ಆದಾಯದಿಂದ ಆ ಕುಟುಂಬದವರು ಜೀವನ ನಡೆಸುವುದಾದರೂ ಹೇಗೆ ಎಂಬ ಕುತೂಹಲ ಹಲವರನ್ನು ಕಾಡಿದೆ.

ಮಧ್ಯಪ್ರದೇಶದ ಘೋಘ್ರಾ ಗ್ರಾಮದ ನಿವಾಸಿ ಬಲರಾಮ್ ಚಾದರ್ ಎಂಬ ಬಾಲಕನ  ಹೆಸರಿನಲ್ಲಿಈ ಜನವರಿಯಲ್ಲಿ ಆದಾಯ ಪ್ರಮಾಣಪತ್ರ ನೀಡಲಾಗಿದೆ. ದಾಖಲೆಯು ತಪ್ಪಾಗಿದೆ ಎಂದು ಇತ್ತೀಚೆಗೆ ತಿಳಿದುಬಂದಿದೆ. 12ನೇ ತರಗತಿ ವಿದ್ಯಾರ್ಥಿಯಾದ ಬಲರಾಮ್ ತನ್ನ ವಾರ್ಷಿಕ ಆದಾಯ ಪ್ರಮಾಣಪತ್ರದೊಂದಿಗೆ ಪೋಸ್ ನೀಡುತ್ತಿರುವ ಪೋಟೋವೊಂದು ಈ ವರ್ಷದ ಆರಂಭದಲ್ಲಿ ವೈರಲ್ ಆಗಿತ್ತು. ಈ ಕುಟುಂಬವು ಕೇವಲ 2 ರೂ.ಗಿಂತ ಕಡಿಮೆ ಆದಾಯ ಪ್ರಮಾಣಪತ್ರ ಪಡೆದ ನಂತರ ಮಾಧ್ಯಮದವರು ಈ ವಿಷಯವನ್ನು ಪರಿಶೀಲಿಸಲು ಪ್ರಯತ್ನಿಸಿದ್ದಾರೆ.  ಆದರೆ ಸರ್ಕಾರಿ ಕೇಂದ್ರದ ಅಧಿಕಾರಿಗಳು ಚಾದರ್‌ಗೆ ಪ್ರಮಾಣಪತ್ರ ನೀಡುವಲ್ಲಿ ತಪ್ಪು ಮಾಡಿದ್ದಾರೆ ಎಂಬುದು ಕೊನೆಗೆ ತಿಳಿದುಬಂದಿದೆ.

ಕಾಮನ್ ಸರ್ವಿಸ್ ಸೆಂಟರ್ ತಮಗೆ ತಪ್ಪು ಪ್ರಮಾಣಪತ್ರ ನೀಡಿದೆ ಎಂದು ಕುಟುಂಬವು ಮಾಧ್ಯಮದವರ ಮುಂದೆ ಹೇಳಿfತ್ತು. ವಾರ್ಷಿಕ 40,000 ರೂ.ಗಳು ಎಂದು ತಮ್ಮ ಆದಾಯದ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡಿದ್ದೇವೆ, ಆದರೆ ಅವರು ತಪ್ಪು ಅಂಕಿಅಂಶಗಳನ್ನು ಹೊಂದಿರುವ ದಾಖಲೆ ನಮಗೆ ನೀಡಿದ್ದಾರೆ. ಇದರಿಂದ ಬಾಲಕನಿಗೆ ವಿದ್ಯಾರ್ಥಿ ವೇತನ ಕೂಡ ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ:ಬ್ರಷ್, ಸ್ನಾನ ಮತ್ತು ಶೇವಿಂಗ್ ಮಾಡದಿದ್ದರೆ ಸಂಬಂಧ ಹಾಳಾಗಬಹುದು? ಹುಷಾರ್‌!

ವಿಚಾರ ತಿಳಿಯುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದೆ ಎನ್ನಲಾಗಿದೆ. ನಂತರ ಪ್ರಮಾಣಪತ್ರ ನೀಡಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯ  ನಂತರ ವಾರ್ಷಿಕ ಆದಾಯ ಪ್ರಮಾಣಪತ್ರವನ್ನು ಸರಿಪಡಿಸಿ ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡಿ  ಚಾದರ್ ಕುಟುಂಬಕ್ಕೆ ನೀಡಲಾಗಿದೆ ಎನ್ನಲಾಗಿದೆ.