Viral News: ಮಗಳ ಮಾವನ ಜೊತೆ ನಾಲ್ಕು ಮಕ್ಕಳ ತಾಯಿಯ ಲವ್ವಿ-ಡವ್ವಿ; ಈ ಕಿಲಾಡಿ ಜೋಡಿ ಮಾಡಿದ್ದೇನು ಗೊತ್ತಾ?
Viral News:ಮಗಳ ಮಾವನ ಜೊತೆ ಮಹಿಳೆಯೊಬ್ಬಳು ಓಡಿ ಹೋಗಿರುವ ಘಟಣೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಬದೌನ್‌ನ ಮಮತಾ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ಮಗಳ ಮಾವ ಶೈಲೇಂದ್ರ ಅಲಿಯಾಸ್ ಬಿಲ್ಲು ಜೊತೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.


ಲಖನೌ: ಕೆಲವು ದಿನಗಳ ಹಿಂದೆ ಮಗಳ ಕೈ ಹಿಡಿಯಬೇಕಾಗಿದ್ದ ಅಳಿಯನ ಜೊತೆ ಮಹಿಳೆಯೊಬ್ಬಳು ಓಡಿ ಹೋದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಗಳ ಮಾವನ ಜೊತೆ ನಾಲ್ಕು ಮಕ್ಕಳ ತಾಯಿಯೊಬ್ಬಳು ಓಡಿ ಹೋಗಿರುವ ಪ್ರಕರಣ ವರದಿಯಾಗಿದೆ. ಬದೌನ್‌ನ ಮಮತಾ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ಮಗಳ ಮಾವ ಶೈಲೇಂದ್ರ ಅಲಿಯಾಸ್ ಬಿಲ್ಲು ಜೊತೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಸದ್ಯ ಈ ಘಟನೆ ದೇಶಾದ್ಯಂತ ಭಾರೀ(Viral News) ಸುದ್ದಿಯಾಗುತ್ತಿದೆ.
ಏನಿದು ಘಟನೆ?
ಮಮತಾ ತನ್ನ ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ತನ್ನ ಮಗಳ ಮಾವನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಮಗಳ ಮಾವ ಶೈಲೇಂದ್ರ ಮಮತಾ ಕರೆದಾಗಲೆಲ್ಲಾ ಮನೆಗೆ ಬರುತ್ತಿದ್ದ. ಅಲ್ಲದೇ ಮನೆಯಲ್ಲಿ ಒಂದು ದಿನ ತಂಗಿ ಮಾರನೇಯ ದಿನ ಹೋಗಿದ್ದೂ ಇದೆ. ಇದು ಗಂಡ ಮಕ್ಕಳ ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ವಾಗ್ವಾದವೂ ನಡೆದಿತ್ತು. ಶೈಲೇಂದ್ರನ ಭೇಟಿಗೆ ಮಮತಾಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿತ್ತು. ಇದರಿಂದ ಈ ಜೋಡಿ ಏಕಾಏಕಿ ಕಣ್ಮರೆಯಾಗಿದ್ದಾರೆ. 43 ವರ್ಷದ ಮಮತಾ ಅವರಿಗೆ ನಾಲ್ಕು ಮಕ್ಕಳಿದ್ದು, ಅವರಲ್ಲಿ ಒಬ್ಬಳಿಗೆ 2022 ರಲ್ಲಿ ವಿವಾಹವಾಗಿತ್ತು. ಕಾಲಾನಂತರದಲ್ಲಿ ಮಗಳ ಮಾವ ಶೈಲೇಂದ್ರ (46) ಜೊತೆ ಮಮತಾ ಸಂಬಂಧವನ್ನು ಬೆಳೆಸಿಕೊಂಡರು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Arvind Kejriwal: ಮಗಳ ನಿಶ್ಚಿತಾರ್ಥದಲ್ಲಿ ʼಸಾಮಿ ಸಾಮಿʼ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕೇಜ್ರಿವಾಲ್ ದಂಪತಿ ; ವಿಡಿಯೋ ವೈರಲ್
ಮಹಿಳೆಯ ಪತಿ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ತಾನು ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದೆ ಮತ್ತು ತನ್ನ ಅನುಪಸ್ಥಿತಿಯಲ್ಲಿ, ನನ್ನ ಪತ್ನಿ ಮಮತಾ ತನ್ನ ಮಗಳ ಮಾವನನ್ನು ಮನೆಗೆ ಆಹ್ವಾನಿಸುತ್ತಿದ್ದರು. ಅವನು ಮನೆಗೆ ಬರುತ್ತಿದ್ದಂತೆ ಮಕ್ಕಳನ್ನು ಬೇರೆ ಕೋಣೆಗೆ ಕಳುಹಿಸುತ್ತಿದ್ದಳು. ಈಗ, ಅವಳು ಅವನೊಂದಿಗೆ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ" ಎಂದು ಸುನಿಲ್ ಕುಮಾರ್ ಹೇಳಿದರು. ಇನ್ನು ಮನೆಗೆ ಬರುತ್ತಿದ್ದವ ಸಂಬಂಧಿಕನೇ ಆಗಿರುವುದರಿಂದ ಯಾರಿಗೂ ಅನುಮಾನವೇ ಬಂದಿರಲಿಲ್ಲ. ಸುನಿಲ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದೂರಿನಾಧಾರದಲ್ಲಿ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ.ಪೊಲೀಸರು ಶೀಘ್ರವೇ ತಮ್ಮ ತನಿಖೆ ಕೈಗೆತ್ತಿಕೊಂಡಿದ್ದಾರೆ.