Arvind Kejriwal: ಮಗಳ ನಿಶ್ಚಿತಾರ್ಥದಲ್ಲಿ ʼಸಾಮಿ ಸಾಮಿʼ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕೇಜ್ರಿವಾಲ್ ದಂಪತಿ ; ವಿಡಿಯೋ ವೈರಲ್
ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿಯವರ ಪುತ್ರಿಯ ನಿಶ್ಚಿತಾರ್ಥ ಸಮಾರಂಭವು ಗುರುವಾರ ರಾತ್ರಿ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ನಡೆದಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಕೇಜ್ರಿವಾಲ್ ಹಾಗೂ ಅವರ ಪತ್ನಿ ಸುನೀತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.


ನವದೆಹಲಿ: ಅರವಿಂದ್ ಕೇಜ್ರಿವಾಲ್(Arvind Kejriwal) ಅವರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿಯವರ ಪುತ್ರಿಯ ನಿಶ್ಚಿತಾರ್ಥ ಸಮಾರಂಭವು ಗುರುವಾರ ರಾತ್ರಿ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ನಡೆದಿದೆ. ಬಹುಕಾಲದ ಗೆಳೆಯ ಸಂಭವ್ ಜೈನ್ ಜೊತೆ ಹರ್ಷಿಕಾ ಕೇಜ್ರಿವಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇಜ್ರಿವಾಲ್ ಆಪ್ತರು, ಕುಟಂಬಸ್ಥರು, ಆಮ್ ಆದ್ಮಿ ಪಾರ್ಟಿ ಪ್ರಮುಖರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಕೇಜ್ರಿವಾಲ್ ಹಾಗೂ ಅವರ ಪತ್ನಿ ಸುನೀತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Kejriwal dance in his daughters wedding!
— North East West South (@prawasitv) April 18, 2025
Harshita daughter of Arvind Kejriwal ties knot with Sambhav Jain in a lavish wedding at Hotel Shangrila in Delhi!
Punjab CM Mann was highlight at the wedding!#ArvindKejriwal #harshita #sanbhav #AamAadmiParty #punjabcm pic.twitter.com/XbJBalXOHA
ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದರ ಜೊತೆಗೆ ಪಂಜಾಬ್ ಸಿಂಹ್ ಭಗವಂತ್ ಸಿಂಗ್ ಮಾನ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಪುಷ್ಪಾ2 ಸಿನಿಮಾದ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ದಂಪತಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪಂಜಾಬಿಯ ಬಾಂಗ್ರಾ ಶೈಲಿಯಲ್ಲಿ ಭಗವಂತ್ ಸಿಂಗ್ ಮಾನ್ ಹೆಜ್ಜೆ ಹಾಕಿದ್ದಾರೆ. ಏಪ್ರಿಲ್ 18 ರಂದು ದೆಹಲಿಯ ಶ್ಯಾಂಗ್ರಿಲಾ ಹೊಟೆಲ್‌ನಲ್ಲಿ ಹರ್ಷಿತಾ ಕೇಜ್ರಿವಾಲ್ ಹಾಗೂ ಸಂಭವ್ ಜೈನ್ ನಿಶ್ಛಿತಾರ್ಥ ನಡೆದಿದೆ. ಏಪ್ರಿಲ್ 18 ರಂದು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿದೆ.
ಈ ಸುದ್ದಿಯನ್ನೂ ಓದಿ: Tej Pratap Yadav: ಡ್ಯಾನ್ಸ್ ಮಾಡಿಲ್ಲಾಂದ್ರೆ ಸಸ್ಪೆಂಡ್ ಮಾಡಿಸ್ತೇನೆ; ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್
ಕೇಜ್ರಿವಾಲ್ ಅವರ ಕಿರಿಯ ಪುತ್ರಿಯಾಗಿರುವ ಹರ್ಷಿತಾ ಅವರು 2018ರಲ್ಲಿ ದೆಹಲಿ ಐಟಿಟಿಯಿಂದ ಕೆಮಿಕಲ್ ಎಂಜಿನಿಯರಿಂದ್ ಪದವಿ ಪಡೆದಿದ್ದಾರೆ. ಸಂಭವ್ ಜೈನ್ ಕೂಡ ಇದೇ ಕಾಲೇಜಿನಲ್ಲಿ ಓದಿದ್ದಾರೆ. ಪದವಿ ಬಳಿಕ ಹರ್ಷಿತಾ ಕೇಜ್ರಿವಾಲ್ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇತ್ತ ಸಂಭವ್ ಜೈನ್ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡತ್ತಿದ್ದರು. ಇತ್ತೀಚೆಗೆ ಇವರಿಬ್ಬರು ಜೊತೆಯಾಗಿ ಬಸಿಲ್ ಹೆಲ್ತ್ ಅನ್ನೋ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸಿದ್ದಾರೆ. ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದೆ.