ಭುವನೇಶ್ವರ: ಸಾಮಾನ್ಯವಾಗಿ ನಾವು ಸಂದೇಶ ಕಳುಹಿಸುವಾಗ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಕೆ ಮಾಡುತ್ತೇವೆ ಆದರೆ ಪೊಲೀಸರು ಇಲ್ಲಿ ಆರೋಪಿಗಳ ಮುಖಕ್ಕೆ ಎಮೋಜಿ (Emoji) ಹಾಕಿ ಫೋಟೊವನ್ನು ಹಂಚಿಕೊಂಡಿದ್ದಾರೆ. ಒಡಿಶಾದ ಬೆರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿಯ (Berhampur Police ) ಎಕ್ಸ್ (x) ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.
ಹಲ್ಲೆ ನಡೆಸಿದ ಸಂಬಂಧ ನಾಲ್ವರನ್ನು ಬಂಧಿಸಿದ್ದ ಬೆರ್ಹಾಂಪುರ ಪೊಲೀಸರು ಅವರ ಮುಖವನ್ನು ಮರೆಮಾಚಲು ಎಮೋಜಿ ಬಳಕೆ ಮಾಡಿದ್ದು ಇದೀಗ ಸುದ್ದಿಯಾಗಿದೆ. ನಾಲ್ವರ ಮುಖದ ಮೇಲೆ ಒಂದೊಂದು ಎಮೋಜಿ ಹಾಕಲಾಗಿದೆ. ಒಬ್ಬನಿಗೆ ಮನವಿ, ಇನ್ನೊಬ್ಬನಿಗೆ ನಿರಾಶೆ, ಮತ್ತೊಬ್ಬನಿಗೆ ಮುಖ ಗಂಟ್ಟಿಕ್ಕಿರುವ ಹಾಗೂ ನಾಲ್ಕನೆಯವನಿಗೆ ಬೇಜಾರಿನಲ್ಲಿರುವ ಎಮೋಜಿಯನ್ನು ಹಾಕಿ ಫೋಟೊ ಪೋಸ್ಟ್ ಮಾಡಿದ್ದಾರೆ.
Gopalpur Police team arrested four persons for assaulting father and son. pic.twitter.com/LiK5ys1WhM
— SP BERHAMPUR (@SP_BERHAMPUR) November 7, 2024
ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದಕ್ಕಾಗಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಬಂಧನದ ನಂತರ ಅವರ ಫೋಟೊಗೆ ಎಮೋಜಿ ಹಾಕಿ ಅದನ್ನು ಶೇರ್ ಮಾಡಿದ್ದಾರೆ. ಫೋಟೋಗೆ ನೆಟ್ಟಿಗರು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದು ಬರ್ಹಾಂಪುರ ಪೊಲೀಸರ ಪೋಸ್ಟ್ ಅನ್ನು ಶ್ಲಾಘಿಸಿದ್ದಾರೆ. ಒಬ್ಬ ಕಮೆಂಟ್ ಮಾಡಿ ಇಷ್ಟು ಮುಗ್ಧ ಮುಖವನ್ನು ಹೊಂದಿರುವವರು ಹಲ್ಲೆ ಮಾಡಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು ಕೆಂಪು ಮುಖ ಇರುವ ಎಮೋಜಿ ಬಳಸಬೇಕು ಎಂದು ಹೇಳಿದ್ದಾರೆ.
ಈ ಮೊದಲು ಈ ತರಹನಾದ ಪೋಸ್ಟ್ ಹಂಚಿಕೊಂಡಿದ್ದ ಬರ್ಹಾಂಪುರ ಪೊಲೀಸ್ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳ ಮುಖಕ್ಕೆ ಎಮೋಜಿ ಹಾಕಿ ಫೋಟೋ ಶೇರ್ ಮಾಡಿತ್ತು.
Drive against Gambling
— SP BERHAMPUR (@SP_BERHAMPUR) October 16, 2024
In the past 10 days, raids against Gambling has been continuously being done by Berhampur police under all police station areas.
Total cases – 17
Accused persons detained – 102
Cash seizure – ₹ 6,07,960
Mobiles seized – 75
Motorcycle seized – 23 pic.twitter.com/Vk5E7R7JkU