Thursday, 12th December 2024

Viral News: ಹಾಕಿ ಫೈನಲ್‌ ಪಂದ್ಯದ ವೇಳೆ ಚೀನಾ ಧ್ವಜ ಹಿಡಿದು ಭಾರತಕ್ಕೆ ಕೇಡು ಬಯಸಿದ ಪಾಕ್‌ ಆಟಗಾರರು

Viral News

ಹುಲುನ್‌ಬಿಯುರ್‌ (ಚೀನಾ): ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನದ ಕುತಂತ್ರ ಬುದ್ಧಿ ಇದೀಗ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ (Asian Champions Trophy) ಟೂರ್ನಿಯಲ್ಲಿಯೂ ಬಯಲಾಗಿದೆ. ಸೆಮಿ ಫೈನಲ್‌ ಪಂದ್ಯದಲ್ಲಿ ಚೀನಾ ತಂಡ ಪಾಕ್‌ಗೆ ಸೋಲುಣಿಸಿದ್ದರೂ ಕೂಡ ಭಾರತ ಮತ್ತು ಚೀನಾ ನಡುವಣ ಫೈನಲ್‌ ಪಂದ್ಯದ ವೇಳೆ ಪಾಕ್‌ ಆಟಗಾರರು ಚೀನಾದ ಧ್ಜಜವನ್ನು ಹಿಡಿದು ಚೀನಾಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಫೋಟೊ ಮತ್ತು ವಿಡಿಯೊ ವೈರಲ್‌(Viral News) ಆಗಿದೆ.

ಆದರೆ ಫೈನಲ್‌ನಲ್ಲಿ ಭಾರತ ಚೀನಾವನ್ನು ಮಣಿಸಿ ಸತತವಾಗಿ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಒಟ್ಟಾರೆಯಾಗಿ ಭಾರತಕ್ಕೆ ಒಲಿದ 5ನೇ ಪ್ರಶಸ್ತಿ ಇದಾಗಿದೆ. ಪಂದ್ಯ ಗೆದ್ದ ಬಳಿಕ ಭಾರತೀಯ ಅಭಿಮಾನಿಗಳು ಪಾಕ್‌ ಎಷ್ಟೇ ಕುತಂತ್ರ ಮಾಡಿದರೂ ಭಾರತವನ್ನು ಮಣಿಸಲು ನಿಮ್ಮಿಂದ ಸಾಧ್ಯವಾಗದು ಎಂದು ತಿರುಗೇಟು ಕೊಟ್ಟಿದ್ದಾರೆ. ಲೀಗ್‌ ಹಂತದಲ್ಲಿ ಭಾರತ ತಂಡ ಪಾಕ್‌ಗೆ ಸೋಲುಣಿಸಿತ್ತು. ಈ ಪಂದ್ಯದಲ್ಲಿ ಪಾಕ್‌ ಆಟಗಾರರು ಭಾರತೀಯ ಆಟಗಾರರ ಜತೆ ಕಿರಿಕ್‌ ಕೂಡ ಮಾಡಿಕೊಂಡಿದ್ದರು.

ಇದನ್ನೂ ಓದಿ Champions Trophy 2025: ಭದ್ರತೆ ಪರಿಶೀಲನೆಗೆ ಪಾಕ್‌ಗೆ ಭೇಟಿ ಕೊಟ್ಟ ಐಸಿಸಿ; ಲಾಹೋರ್‌ನಲ್ಲಿ ಭಾರತದ ಪಂದ್ಯ!

ಮಂಗಳವಾರ (ಸೆ.17) ನಡೆದಿದ್ದ ಆತಿಥೇಯ ಚೀನಾ ವಿರುದ್ಧ ಅತ್ಯಂತ ಜಿದ್ದಾಜಿದ್ದಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತವು 1-0 ಅಂತರದಿಂದ ಗೆದ್ದು ಚಾಂಪಿಯನ್‌ ಎನಿಸಿಕೊಂಡಿತು. ಕೊನೆಯ ಕ್ಷಣದಲ್ಲಿ ಜುಗ್ರಾಜ್‌ ಸಿಂಗ್‌ ಅವರು ಬಾರಿಸಿದ ಏಕೈಕ ಗೋಲು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಐದು ಪ್ರಶಸ್ತಿಗಳೊಂದಿಗೆ, ಭಾರತವು ಅತ್ಯಥದಿಕ ಏಷ್ಯನ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಪಾಕಿಸ್ತಾನವು ಮೂರು ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಭಾರತದೊಂದಿಗೆ ಹಂಚಿಕೊಂಡ ಒಂದು ಪ್ರಶಸ್ತಿಯೂ ಸೇರಿಕೊಂಡಿದೆ.

ಏಷ್ಯನ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯನ್ನು 2011ರಲ್ಲಿ ಆಡಲಾಯಿತು. ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಉದ್ಘಾಟನಾ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ರಾಜ್ಪಾಲ್ ಸಿಂಗ್ ನಾಯಕತ್ವದಲ್ಲಿ ಭಾರತ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿತು. 2011ರ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಭಾರತ ಫೈನಲ್ ಪ್ರವೇಶಿಸಿತ್ತು.ಪಾಕಿಸ್ತಾನವು 2012ರಲ್ಲಿ ಮುಂದಿನ ಆವೃತ್ತಿಯನ್ನು ಗೆದ್ದಿತು. ಹಾಲಿ ಚಾಂಪಿಯನ್ ಭಾರತವನ್ನು ಸೋಲಿಸಿತು. 2021ರಲ್ಲಿ ದಕ್ಷಿಣ ಕೊರಿಯಾ ತಂಡ ಗೆಲ್ಲುವ ತನಕ ಭಾರತ ಹಾಗೂ ಪಾಕಿಸ್ತಾನವೇ ಇದರಲ್ಲಿ ಪಾರಮ್ಯ ಮೆರೆದಿತ್ತು.