ಫಿಲಿಪೈನ್ಸ್: ಫಿಲಿಪೈನ್ಸ್‌ನಲ್ಲಿರುವ ಹೋಟೆಲ್‍ವೊಂದು ದೈತ್ಯ ಕೋಳಿಯ ದೇಹದಾಕಾರದಲ್ಲಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಯಾಕೆಂದರೆ ಮಾಸ್ಟರ್ ಮೈಂಡ್ ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರ ಯೋಜನೆಯಾಗಿರುವ 39 ಅಡಿ ಎತ್ತರದ ಈ ಪ್ರತಿಮೆ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ. ಇತ್ತೀಚೆಗೆ, ನೀಗ್ರೋಸ್ ಆಕ್ಸಿಡೆಂಟಲ್‍ನಲ್ಲಿರುವ ಚಿಕನ್ ಶೇಪ್ ಹೋಟೆಲ್ “ವಿಶ್ವದ ಅತಿದೊಡ್ಡ ಕಟ್ಟಡ” ಎಂದು ಪ್ರತಿಷ್ಠಿತ ಗಿನ್ನಿಸ್ ವರ್ಲ್ಡ್ ರೆಕಾರ್ಡ್‍ನಿಂದ ಹೆಸರನ್ನು ಪಡೆದುಕೊಂಡಿದೆ.
ಫಿಲಿಪೈನ್ಸ್‌ನ ನೀಗ್ರೋಸ್ ಆಕ್ಸಿಡೆಂಟಲ್‍ನಲ್ಲಿರುವ ಚಿಕನ್ ಶೇಪ್ ಹೋಟೆಲ್ “ವಿಶ್ವದ ಅತಿದೊಡ್ಡ ಕಟ್ಟಡ” ಎಂದು ಪ್ರತಿಷ್ಠಿತ ಗಿನ್ನಿಸ್ ವರ್ಲ್ಡ್ ರೆಕಾರ್ಡ್‍ನಿಂದ ಹೆಸರನ್ನು ಪಡೆದುಕೊಂಡಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‍ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಚಾರ ಘೋಷಿಸಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನಸೆಳೆದಿದೆ.
“ಕ್ಯಾಂಪುಸ್ಟೊಹಾನ್ ಹೈಲ್ಯಾಂಡ್ ರೆಸಾರ್ಟ್‌ನ ರಜಾ ತಾಣವು ಅಧಿಕೃತವಾಗಿ ಚಿಕನ್ ಶೇಪ್‍ನಲ್ಲಿರುವ ಅತಿದೊಡ್ಡ ಕಟ್ಟಡವಾಗಿದೆ” ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‍ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಶೀರ್ಷಿಕೆಯನ್ನು ನೀಡುವುದರ ಮೂಲಕ ಘೋಷಿಸಿದೆ.
ಈ ಕಟ್ಟಡವನ್ನು ನಿರ್ಮಿಸುವ ಮೊದಲು ಈ ಬೃಹತ್ ರಚನೆಯನ್ನು ಹೇಗೆ ಮಾಡಬಹುದು ಎಂದು ಆರು ತಿಂಗಳವರೆಗೆ ಯೋಜಿಸಲಾಗಿತ್ತು ಎಂದು ವರದಿಯಾಗಿದೆ. 34.931 ಮೀ (114 ಅಡಿ 7 ಇಂಚು) ಎತ್ತರ, 12.127 ಮೀ (39 ಅಡಿ 9 ಇಂಚು) ಅಗಲ ಮತ್ತು 28.172 ಮೀ (92 ಅಡಿ 5 ಇಂಚು) ಉದ್ದವಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲಿಸಲಾಗಿದೆ. ಅಲ್ಲದೇ ಈ ಹೋಟೆಲ್ ಕೋಳಿಯಾಕಾರದಲ್ಲಿ ಕಾಣುವುದು ಮಾತ್ರವಲ್ಲ ಈ ಹೋಟೆಲ್ ಇನ್ನೂ ಅನೇಕ ವಿಚಾರಗಳನ್ನು ಒಳಗೊಂಡಿದೆ. ಪ್ರಯಾಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ.
ಈ ಹೋಟೆಲ್ 15 ಕೊಠಡಿಗಳನ್ನು ಹೊಂದಿದ್ದು, ಬೃಹತ್ ಮತ್ತು ಆರಾಮದಾಯಕ ಬೆಡ್‍ಗಳು, ಎಸಿಗಳು ಮತ್ತು ದೊಡ್ಡ ಟಿವಿ ಪ್ರದರ್ಶನಗಳು ಸೇರಿದಂತೆ ಹೆಚ್ಚು ಅಗತ್ಯವಿರುವ ಸೌಲಭ್ಯಗಳನ್ನು ಹೊಂದಿದೆಯಂತೆ. ಫಿಲಿಪೈನ್ಸ್ ಪ್ರವಾಸದ ಸಮಯದಲ್ಲಿ ಆರಾಮದಾಯಕವಾದ ವಸತಿ ಸೌಕರ್ಯವನ್ನು ಪಡೆಯಲು ಬಯಸುವ ಕುಟುಂಬಗಳು ಇಲ್ಲಿ ರೂಂ ಬುಕ್ ಮಾಡಬಹುದು.
ಇದನ್ನೂ ಓದಿ:ಐಸ್‍ಕ್ರೀಂಗಾಗಿ ತಂದೆಯ ಜತೆ ಮುದ್ದಾಗಿ ಜಗಳವಾಡಿದ ಮಗಳು; ಈ ಕ್ಯೂಟ್ ವಿಡಿಯೊ ನೋಡಿ
ಇಲ್ಲಿ ಜನರನ್ನು ಆಕರ್ಷಿಸಲು ಈಜುಕೊಳಗಳು, ರೆಸ್ಟೋರೆಂಟ್, ಕೆಫೆ ಮತ್ತು ಇನ್ನೂ ಅನೇಕ ಆಕರ್ಷಕ ಸ್ಥಳಗಳನ್ನು ಒಳಗೊಂಡಿದೆ. ಈಗಾಗಲೇ ಸ್ಥಳೀಯ ಜನರಿಗೆ ಪ್ರಿಯವಾಗಿರುವ ಈ ರೆಸಾರ್ಟ್ ವರ್ಲ್ಡ್ ರೆಕಾರ್ಡ್‍ನಲ್ಲಿ ಹೆಸರು ಗಳಿಸಿದ ನಂತರ ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ ಎನ್ನಲಾಗಿದೆ.