Saturday, 14th December 2024

Viral News: ಮಾಲೀಕನ ಮೇಲಿನ ಕೋಪಕ್ಕೆ ರೊಟ್ಟಿಯಲ್ಲಿ ಮೂತ್ರ ಬೆರೆಸಿದ್ಳು; ಚಾಲಾಕಿ ಕೆಲಸದಾಕೆಯ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆ

viral news

ಲಕ್ನೋ: ಮಾಲಿಕನ ಮೇಲಿನ ಕೋಪಕ್ಕೆ ಮನೆಕೆಲಸದಾಕೆಯೊಬ್ಬಳು ಆತನ ಆಹಾರದಲ್ಲಿ ಮೂತ್ರ ಬೆರೆಸಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಗಾಜಿಯಾಬಾದ್‌ನ ರೀನಾ ಎಂಬಾಕೆ ಅಡುಗೆಯಲ್ಲಿ ಮೂತ್ರ ಬೆರೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral News) ಆಗುತ್ತಿದೆ. ಇದೀಗ ಆರೋಪಿ ರೀನಾಳನ್ನು ಗಾಜಿಯಾಬಾದ್‌ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರೀನಾ ತಪ್ಪೊಪ್ಪಿಕೊಂಡಿದ್ದು, ತನ್ನ ಕೃತ್ಯಕ್ಕೆ ಆಕೆ ನೀಡಿದ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಗಾಜಿಯಾಬಾದ್‌ನ ರಿಯೆಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡಿ ಕೊಂಡಿದ್ದ ರೀನಾ ಸುಮಾರು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದಳು. ತನ್ನ ತಪ್ಪಿಗೆ ಬೈಯುವ ಮನೆಮಂದಿ ಮೇಲೆ ದ್ವೇಷ ಸಾಧಿಸುತ್ತಿದ್ದಳು. ಕಳೆದ ಕೆಲವು ವರ್ಷಗಳಿಂದ ಉದ್ಯಮಿ ಕುಟುಂಬವು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹಲವಾರು ಬಾರಿ ಚಿಕಿತ್ಸೆ ಪಡೆದರೂ ಕೂಡ ಕಡಿಮೆ ಆಗಿರಲಿಲ್ಲ. ಹೊರಗಿನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿದರೂ ಕೂಡ ಏನು ಪರಿಣಾಮವಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಆಹಾರದಲ್ಲಿ ಆಗುವ ಕಲಬೆರಕೆ ಕಂಡು ಹಿಡಿಯಲು ಮನೆಯಲ್ಲಿ ಮನೆಯಲ್ಲಿ ಕ್ಯಾಮರಾ ಅಳವಡಿಸಿದ್ದರು. ಕ್ಯಾಮರ ಕಣ್ಣಲ್ಲಿ ಮನೆಕೆಲಸದಾಕೆಯ ಕಳ್ಳಾಟ ಸೆರೆಯಾಗಿದೆ. ಆರಂಭದಲ್ಲಿ ಆರೋಪವನ್ನು ನಿರಾಕರಿಸಿದ ಅವಳು ವಿಡೀಯೋ ತೋರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಉದ್ಯಮಿ ನೀಡಿದ್ದ ದೂರಿನ ಆಧಾರದ ಮೇರೆಗೆ ರೀನಾಳನ್ನು ಬಂಧಿಸಿದ ಗಾಜಿಯಾಬಾದ್‌ ಪೋಲೀಸರು ವಿಚಾರಣೆ ನಡೆಸಿದ್ದಾರೆ.

ಸುಮಾರು ಎಂಟು ವರ್ಷಗಳಿಂದ ಉದ್ಯಮಿಯೊಬ್ಬರ ಮನೆಕೆಲಸ ಮಾಡಿಕೊಂಡಿದ್ದ ರೀನಾಗೆ ಉದ್ಯಮಿ ಮನೆಯವರು ಸಣ್ಣ ಪುಟ್ಟ ತಪ್ಪಿಗೆ ಬೈಯುತ್ತಿದ್ದರು. ಇದರಿಂದ ಕೋಪಗೊಂಡ ಮನೆಕೆಲಸದಾಕೆ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

Ratan Tata: 1996ರಲ್ಲಿ ಪಿ ವಿ ನರಸಿಂಹ ರಾವ್‌ಗೆ ರತನ್ ಟಾಟಾ ಬರೆದ ಲೆಟರ್‌ ವೈರಲ್‌; ಪತ್ರದಲ್ಲೇನಿದೆ?