ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈ ಆಂಟಿ ಬಲು ಡೇಂಜರಪ್ಪಾ...! 4 ವರ್ಷದಿಂದ ಡೇಟಿಂಗ್ ಮಾಡ್ತಿದ್ದವನಿಗೆ ಕಾದಿತ್ತು ಬಿಗ್‌ ಶಾಕ್‌!

26 ವರ್ಷದ ಯುವಕನೊಬ್ಬ ನಾಲ್ಕು ವರ್ಷಗಳಿಂದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಕೊನೆಗೆ ಆ ಯುವತಿಗೆ 48 ವರ್ಷ ವಯಸ್ಸಾಗಿದೆ ಎಂದು ಗೊತ್ತಾಗಿ ತನ್ನ ಕಥೆಯನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ.

ವಯಸ್ಸು 48 ವರ್ಷ... ಹೇಳ್ಕೊಳ್ಳೋದು 26- ಈ ಆಂಟಿ ಬಲು ಡೇಂಜರಪ್ಪಾ...!

Profile pavithra Apr 18, 2025 5:09 PM

ಇತ್ತೀಚೆಗೆ 26 ವರ್ಷದ ಯುವಕನೊಬ್ಬ 27 ವರ್ಷದ ಯುವತಿಯೊಂದಿಗೆ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ. ಆದರೆ ಆ ಯುವತಿಗೆ 48 ವರ್ಷ ವಯಸ್ಸಾಗಿದ್ದು, ಆಕೆ ನಿಜವಾಗಿಯೂ ತನಗಿಂತ 21 ವರ್ಷ ದೊಡ್ಡವಳು ಎಂದು ಕಂಡುಕೊಂಡ ನಂತರ ಆ ಯುವಕ ಶಾಕ್‌ ಆಗಿದ್ದಾನೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ. ಪೋಸ್ಟ್‌ನಲ್ಲಿ ಆತ ತಾನು 26 ವರ್ಷದ ವ್ಯಕ್ತಿಯಾಗಿದ್ದು, ತಾನು 4 ವರ್ಷಗಳಿಂದ 27 ವರ್ಷದ ಯುವತಿಯೊಂದಿಗೆ ಡೇಟಿಂಗ್‍ನಲ್ಲಿದ್ದೆ. ತನ್ನ ಗೆಳತಿ ಯಾವಾಗಲೂ ತಾನು ಏಪ್ರಿಲ್ 1998 ರಲ್ಲಿ ಜನಿಸಿದ್ದೇನೆ ಎಂದು ಹೇಳುತ್ತಿದ್ದಳು.

ಆದರೆ ಆಕೆಯ ಲ್ಯಾಪ್‌ಟಾಪ್‌ ಮೂಲಕ ಬ್ರೌಸ್ ಮಾಡುವಾಗ, ಆಕೆಯ ಪಾಸ್‌ಪೋರ್ಟ್‌ ಫೋಟೊ ತನಗೆ ಸಿಕ್ಕಿದೆ. ಅದರಲ್ಲಿ ಅವಳ 1977ರಲ್ಲಿ ಹುಟ್ಟಿದ್ದಾಳೆ ಎಂದು ಗೊತ್ತಾಗಿದೆ. ಆಕೆ ತನಗಿಂತ 21 ವರ್ಷ ದೊಡ್ಡವಳು! ಈಗ ತನಗೆ ಏನು ಮಾಡಬೇಕು? ಎಂದು ತಿಳಿಯುತ್ತಿಲ್ಲ. ತನಗೆ ತುಂಬಾ ಭಯವಾಗಿದೆ ಎಂದು ಹೇಳಿದ್ದಾನೆ.

ಅವಳು ಚಿಕ್ಕವಳಂತೆ ಕಾಣುತ್ತಿದ್ದಳು ಮತ್ತು 27 ವರ್ಷದವಳಂತೆ ಕಾಣುತ್ತಿದ್ದರಿಂದ ಅವಳ ವಯಸ್ಸನ್ನು ತಾನು ಅನುಮಾನಿಸಲು ಹೋಗಲಿಲ್ಲ. ಇದು ತನ್ನ ಮೊದಲ ಸಂಬಂಧವಾಗಿದೆ. ಅದು ಅಲ್ಲದೇ ಅವಳು ತನ್ನ ಚರ್ಮದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾಳಂತೆ. ಆಕೆಯ ಐಡಿ ಅಥವಾ ಪಾಸ್‌ಪೋರ್ಟ್‌ ಕೇಳಿದಾಗಲೆಲ್ಲಾ, ಅವಳು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂದು ಆತ ಹೇಳಿದ್ದಾನೆ. ಅಷ್ಟೇ ಅಲ್ಲದೆ ಅವಳ ಲ್ಯಾಪ್‌ಟಾಪ್‌ನಲ್ಲಿ ಆಕೆ ಗರ್ಭಿಣಿ ಎಂಬ ರಿಪೋರ್ಟ್‌ ಇರುವುದು ಕಂಡುಕೊಂಡೆ. ಈ ಬಗ್ಗೆ ಆಕೆ ತನಗೆ ಎಂದಿಗೂ ಹೇಳಿರಲಿಲ್ಲ ಎಂದು ತಿಳಿಸಿದ್ದಾನೆ.

ಈ ಪೋಸ್ಟ್ ವೈರಲ್ ಆಗಿದ್ದು, ಕೆಲವರು ಕಾಮೆಂಟ್ ಮಾಡಿ ಕಾಳಜಿಯನ್ನು ತೋರಿಸಿದ್ದಾರೆ. ಹೆಚ್ಚಿನವರು ಸಂಬಂಧವನ್ನು ತೊರೆಯುವಂತೆ ಸಲಹೆ ನೀಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "ಇದು ನಿಜವಾಗಿದ್ದರೆ ಬ್ರೇಕಪ್ ಮಾಡಿ. ಅವಳು ನಿಮಗೆ ನಿರಂತರವಾಗಿ ಸುಳ್ಳು ಹೇಳಿದ್ದಾಳೆ. ಅವಳು ನಿಮ್ಮಿಂದ ಬೇರೆ ಯಾವ ವಿಷಯಗಳನ್ನು ಮರೆಮಾಡಿದ್ದಾಳೆಂದು ಯಾರಿಗೆ ತಿಳಿದಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಯೋ? ಇಲ್ಲ, ರಣರಂಗವೋ? ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಮತ್ತೊಬ್ಬರು ಕಾಮೆಂಟ್ ಮಾಡಿ, "ಬ್ರೋ ಇದು ನಿಜವಾಗಿಯೂ ಭಯಾನಕವಾಗಿದೆ. ಇದು ನಿಜವಾಗಿದ್ದರೆ, ಈ ಮಹಿಳೆ ಅಕ್ಷರಶಃ ಮನೋರೋಗಿ. ಮತ್ತು ಅವಳು ಇನ್ನು ಹೆಚ್ಚು ಗಂಭೀರವಾದ ಸುಳ್ಳುಗಳನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ ... ದಯವಿಟ್ಟು, ನೀವು ಅವಳಿಂದ ದೂರವಿರಿ. ಬಹುಶಃ ಅವಳು ಇದು ನಿಮ್ಮ ಮಗು ಎಂದು ಹೇಳಬಹುದು” ಎಂದಿದ್ದಾರೆ.