Sunday, 24th November 2024

Viral News: 2 ವರ್ಷದಲ್ಲಿ 100 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ; ಸಿಕ್ರೆಟ್‌ ಟಿಪ್ಸ್‌ ಹೀಗಿದೆ!

Viral News

ಸಿಂಗಾಪುರ : ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿಯೇ ಕಾರಣ. ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೂ ಸಿಂಗಾಪುರದಲ್ಲಿ ಇಬ್ಬರು ಮಕ್ಕಳ ತಾಯಿಯೊಬ್ಬರು ಕೇವಲ ಎರಡು ವರ್ಷಗಳಲ್ಲಿ 100 ಕೆ. ಜಿ ತೂಕವನ್ನು ಇಳಿಸಿಕೊಂಡು ತನ್ನ ಪತಿ ಮತ್ತು ಮಗನೊಂದಿಗೆ ಸ್ಫೂರ್ತಿ ತುಂಬಿದ್ದಾರೆ. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಶರೀಫಾ ಒಸ್ಮಾನ್ ಎಂಬ ಮಹಿಳೆಯು  2022 ರ ಹೊಸ ವರ್ಷದ ಸಮಯದಲ್ಲಿ ತೂಕ ಇಳಿಸುವ ಪ್ರತಿಜ್ಞೆ ಮಾಡಿದ್ದರಂತೆ. ಆರಂಭದಲ್ಲಿ, ಅವರ ತೂಕ 105 ಕೆ.ಜಿ ಇದ್ದಿತ್ತು. ಹಾಗಾಗಿ ಅವರನ್ನು ಬೊಜ್ಜು ಮಹಿಳೆ ಎಂದು ಪರಿಗಣಿಸಲಾಗಿತ್ತು. ವೈದ್ಯರನ್ನು ಭೇಟಿ ಮಾಡಿದಾಗ ಅವರಿಗೆ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಬರುವ ಸಂಭವವಿದೆ ಎಂದು ತಿಳಿಸಿದ್ದರು.

Viral News

ಮುಂದೆ ತನಗೆ ಅಪಾಯಕಾರಿ ಕಾಯಿಲೆಗಳು ಬರುವ ಸೂಚನೆ ತಿಳಿದ ಶರೀಫಾ ತೂಕ ಇಳಿಸುವ ನಿರ್ಧಾರ ಮಾಡಿದ್ದಾರೆ. ಅದಲ್ಲದೇ ಅವರ ಗಂಡನಿಗೆ ಎರಡನೇ ಬಾರಿ ಹೃದಯಾಘಾತವಾಯಿತು. ಆಗ ಅವರ ಮಕ್ಕಳು ಇನ್ನೂ ಚಿಕ್ಕವರು. ಹಾಗಾಗಿ ಅವರು ತನಗಾಗಿ ಮಾತ್ರವಲ್ಲದೆ ಇಡೀ ಕುಟುಂಬಕ್ಕಾಗಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ನಿರ್ಧಾರ ಮಾಡಿದ್ದರಂತೆ. ಅದಕ್ಕಾಗಿ ತನ್ನ ದಿನಚರಿಯ ಆಹಾರ ಮತ್ತು ವ್ಯಾಯಾಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ಶರೀಫಾ ಅವರು, ದೀನ್ ಮುಜಾಹಿದ್ ಎಂಬ ವೈಯಕ್ತಿಕ ತರಬೇತುದಾರ ಸಲಹೆಯನ್ನು ಅನುಸರಿಸಿದ್ದಾರೆ. ಅದರಂತೆ ಅವರು  ಪ್ರತಿದಿನ 5 ಕಿ.ಮೀ ವಾಕಿಂಗ್, ಜಂಪ್ ರೋಪ್ ವ್ಯಾಯಾಮಗಳು, ಲಿಫ್ಟ್ ಬದಲು ಮೆಟ್ಟಿಲುಗಳನ್ನು ಹತ್ತುವುದು, ಊಟದ ವಿರಾಮದ ಸಮಯದಲ್ಲಿ ಜಿಮ್ ಸೆಷನ್‍ಗಳನ್ನು ತೆಗೆದುಕೊಳ‍್ಳುವುದು. ಹೀಗೆ ಈ ಚಟುವಟಿಕೆಗಳು ಅವರ ದೈನಂದಿನ ಚಟುವಟಿಕೆಗಳಾಗಿದ್ದು, ಇದು ಅವರ ದೇಹವನ್ನು ಫಿಟ್ ಆಗಿಸಲು ಸಹಾಯ ಮಾಡಿದೆಯಂತೆ.  

ಅವರ ಆಹಾರದ ಬಗ್ಗೆ ಹೇಳುವುದಾದರೆ, ಶರೀಫಾ ತನ್ನ ಊಟದ ತಟ್ಟೆಯಲ್ಲಿ ಅನಾರೋಗ್ಯಕರ ಊಟದ ಬದಲಿಗೆ ಆರೋಗ್ಯಕರ ಆಹಾರಗಳನ್ನು ಸೇರಿಸಿಕೊಂಡರು.  ಅವರ ಆಹಾರದಲ್ಲಿನ ಈ ಬದಲಾವಣೆಯು ತೂಕ ನಷ್ಟಕ್ಕೆ ಬಹಳ ಸಹಕಾರಿಯಾಗಿದೆಯಂತೆ. ಬಹುಶಃ ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆ ಹಾಗೂ  ಮಧ್ಯಾಹ್ನದ ಊಟಕ್ಕೆ ತರಕಾರಿಗಳೊಂದಿಗೆ ಸಾಲ್ಮನ್ ಅನ್ನು ಸೇವಿಸುತ್ತಾರಂತೆ.

ಇದನ್ನೂ ಓದಿ:ಮುಂಬೈ ಬೀದಿಯ ಭಿಕ್ಷುಕ ಭರತ್‌ ಜೈನ್‌ ಕೋಟ್ಯಧಿಪತಿ!

17 ತಿಂಗಳ ಆಹಾರಕ್ರಮದಲ್ಲಿ, ಶರೀಫಾ 50 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಅದೂ ಅಲ್ಲದೇ, ಅವರ ಈ ತೂಕ ಇಳಿಕೆಯ ಜರ್ನಿ ಸಾಕಷ್ಟು ಜನರಿಗೆ ಸ್ಫೂರ್ತಿ ನೀಡಿದೆಯಂತೆ.