ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಮೊದಲ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video)ಆಗಿದೆ.
ವೈರಲ್ ವಿಡಿಯೊದಲ್ಲಿ ಇಬ್ಬರು ಮಕ್ಕಳು ಮನೆಯ ಮೊದಲ ಮಹಡಿಯ ಬಾಲ್ಕನಿಯಲ್ಲಿ ಇದ್ದಾಗ ಒಂದು ಮಗು ಮೇಲಿಂದ ಕೆಳಗೆ ಬಿದ್ದಿದೆ. ತಕ್ಷಣ ನೆರೆಮನೆಯವರು ಓಡಿ ಬಂದು ಮಗುವನ್ನು ಎತ್ತಿಕೊಂಡು ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೇಲಿರುವ ಮಗುವನ್ನು ಮನೆಯವರು ಬಂದು ರಕ್ಷಿಸಿದ್ದಾರೆ. ವರದಿಗಳ ಪ್ರಕಾರ, ಸೆಕ್ಟರ್ 122 ರ ಸನ್‍ಶೈನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
Dear Parents please dont leave your child alone.#Noida SunShine Apartments, 3 yr old Child falls from First floor.#ViralVideo #ChildCare #DishaPatani #BanSwiggyPharmacy #Zomato #BhoolBhulaiya3Review #TejRAn #IndianArmy#Pushpa2TheRuleTrailer #ThePenguin #Strictly pic.twitter.com/JK80jrHU76
— Anushka Singh Rawat (@AnuRawat01) November 11, 2024
ಈ ಹಿಂದೆ ಗ್ರೇಟರ್ ನೋಯ್ಡಾದ ವಸತಿ ಕಟ್ಟಡದ 27 ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಪವಾಡಸದೃಶವಾಗಿ ಬದುಕುಳಿದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ಅವಳು 12ನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದಳು. ಗ್ರೇಟರ್ ನೋಯ್ಡಾದ ಗೌರ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಗಾಯಗೊಂಡ ಬಾಲಕಿಯನ್ನು ಮೇಲೆತ್ತಿದ್ದಾನೆ. ವರದಿಗಳ ಪ್ರಕಾರ, ಬಾಲಕಿಯನ್ನು ಸರ್ವೋದಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಬಾಲಕಿಗೆ ಆಂತರಿಕ ಗಾಯಗಳಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಬಾಲಕಿಯ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬಾಲ್ಕನಿ ಕಡೆಗೆ ಹೋಗಿ ಅಲ್ಲಿಂದ ಕೆಳಗೆ ಬಿದ್ದಿದ್ದಾಳೆ ಎಂದು ವರದಿಗಳು ತಿಳಿಸಿವೆ.
Greater Noida West: गौर सिटी 2 के 14 एवेन्यू में 27वें फ्लोर से 5 साल की बच्ची गिर गई। बच्ची 12वें फ्लोर की बालकनी में फंसी, गंभीर चोटें आईं। उसे सर्वोदय हॉस्पिटल में भर्ती कराया गया। हादसा दोपहर करीब 12.30 से 1 बजे के बीच हुआ। PS Bisrakh @noidapolice pic.twitter.com/npnYYdlKxa
— The News गली (@The_News_Gali) October 4, 2024
ಇದನ್ನೂ ಓದಿ:ರೈಲಿನ ಬಾಗಿಲು ಹಿಡಿದು ವೃದ್ಧನ ಸರ್ಕಸ್; ಇದೆಂಥಾ ಮೂರ್ಖತನವೆಂದ ನೆಟ್ಟಿಗರು; ವಿಡಿಯೊ ನೋಡಿ
ನಡೆದ ಈ ಎಲ್ಲಾ ಘಟನೆಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಘಾತವನ್ನುಂಟುಮಾಡಿದೆ. ಗ್ರೇಟರ್ ನೋಯ್ಡಾದ ಎತ್ತರದ ಕಟ್ಟಡಗಳಲ್ಲಿನ ಭದ್ರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಫ್ಲ್ಯಾಟ್‍ಗಳ ಬಾಲ್ಕನಿಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸುತ್ತಾರೆ.