Sunday, 24th November 2024

Viral Video: ಭತ್ತದ ಗದ್ದೆಯಲ್ಲಿ10 ಅಡಿ ಉದ್ದದ ಹೆಬ್ಬಾವು; ರೈತರು ಮಾಡಿದ್ದೇನು? ವಿಡಿಯೊ ನೋಡಿ

Viral Video

ಉತ್ತರಪ್ರದೇಶ: ಬೃಹದಾಕಾರದ ಹೆಬ್ಬಾವೊಂದು ಉತ್ತರ ಪ್ರದೇಶದ ಫತೇಪುರದ ಭತ್ತದ ಗದ್ದೆಯಲ್ಲಿ ಪತ್ತೆಯಾಗಿದ್ದು ಇದನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ರೈತರು ಹಾವನ್ನು ಹಿಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಹೆಬ್ಬಾವು ಸುಮಾರು 10 ಅಡಿ ಉದ್ದವಿದ್ದು ಹೊಲದಲ್ಲಿ ಮಲಗಿತ್ತು . ಔಷಧಸಿಂಪಡಿಸುತ್ತಿದ್ದ ರೈತರು ಈ ಹಾವನ್ನು ಕಂಡು ತಕ್ಷಣ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ವೈರಲ್ ವಿಡಿಯೊದಲ್ಲಿ ಗ್ರಾಮಸ್ಥರು ಉದ್ದನೆಯ ಹೆಬ್ಬಾವನ್ನು ಹೊಲದಿಂದ ರಕ್ಷಿಸಿದ ನಂತರ ಅದನ್ನು ಚೀಲದಲ್ಲಿ ಹಾಕಿ ಕಟ್ಟಿದ್ದಾರೆ. ಗ್ರಾಮಸ್ಥರೆಲ್ಲಾ ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ನೋಡುಗರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‍ಗಳಲ್ಲಿ ರೆಕಾರ್ಡ್ ಮಾಡಿ, ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯ ವೇಳೆ ಅರಣ್ಯ ಇಲಾಖೆಯವರು ಭಾಗಿಯಾಗಿದ್ದಾರೆಯೇ? ಇಲ್ಲವೇ? ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಗ್ರಾಮದಲ್ಲಿ ಹೆಬ್ಬಾವಿನ ಇರುವ ಸುದ್ದಿ ಕೇಳಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದನ್ನೂ ಓದಿ: ತನ್ನ ತಲೆಗಿಂತ ಎರಡು ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವು! ವಿಡಿಯೊ ನೋಡಿ

ಆದರೆ ಈ ಘಟನೆಯಲ್ಲಿ  ರೈತರು ಪ್ರದರ್ಶಿಸಿದ ಧೈರ್ಯ ಮತ್ತು ಜಾಗರೂಕತೆ ಗ್ರಾಮಸ್ಥರ ಜೀವವನ್ನು ಉಳಿಸಲು ಸಹಾಯ ಮಾಡಿದೆ ಎಂದು ವೈರಲ್ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ.