ಬೆಂಗಳೂರು: ಅನಿರೀಕ್ಷಿತ ಕ್ಷಣಗಳನ್ನು ಸೆರೆಹಿಡಿಯುವ ಮದುವೆಯ ವೀಡಿಯೊಗಳು ಆಗಾಗ್ಗೆ ಸೋಶಿಯಲ್ ಮೀಡಿಯಗಳಲ್ಲಿ ಹರಿದಾಡುತ್ತಿರುತ್ತವೆ. ಅವುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಜನರು ತಮಾಷೆಯ ಮತ್ತು ಮನರಂಜನೆಯ ವಿಡಿಯೊಗಳನ್ನು ನೋಡಲು ಇಷ್ಟಪಡುತ್ತಾರೆ. ಇದರಲ್ಲಿ ಕೆಲವು ವಿಡಿಯೊಗಳು ಮನರಂಜನೆ ನೀಡಿದರೆ ಕೆಲವೊಂದು ತಮಾಷೆಗಳು ಜಗಳಕ್ಕೆ ಮೂಲಗವಾಗುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಂತಹದೊಂದು ವಿಡಿಯೊ ಹರಿದಾಡುತ್ತಿದೆ. ವಧು ವರರ ಈ ವೈರಲ್ (Viral Video)ವಿಡಿಯೊದಲ್ಲಿ ಮದುವೆ ಸಮಾರಂಭದಲ್ಲಿ ನಡೆದ ಆಘಾತಕಾರಿ ಮತ್ತು ತಮಾಷೆಯ ಘಟನೆಯನ್ನು ತೋರಿಸುತ್ತದೆ.
shaadi do dilon ka milan hai.. oh wait pic.twitter.com/o9nKeFdZJH
— Godman Chikna (@Madan_Chikna) December 5, 2019
ಈ ವೈರಲ್ ವಿಡಿಯೊವನ್ನು “ಗಾಡ್ ಮ್ಯಾನ್ ಚಿಕ್ನಾ” ಎಂಬ ಹೆಸರಿನ ಎಕ್ಸ್ (ಹಿಂದೆ ಟ್ವಿಟರ್) ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೊದಲ್ಲಿ ವಧು ಮತ್ತು ವರರು ವೇದಿಕೆಯ ಮೇಲೆ ಕುಳಿತಿದ್ದಾಗ ಅವರ ಸುತ್ತಲೂ ಸಂಬಂಧಿಕರು ಫೋಟೋಗಳನ್ನು ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಆಗ ಅಲ್ಲಿ ಸಂಬಂಧಿಕನೊಬ್ಬ ವರನೊಂದಿಗೆ ತಮಾಷೆ ಮಾಡುತ್ತಾ ವರನ ಪೇಟವನ್ನು ತೆಗೆಯುತ್ತಾ ಅವನಿಗೆ ಕಿರಿಕಿರಿ ಮಾಡುತ್ತಿರುತ್ತಾನೆ. ಶುರುವಿಗೆ, ವರನು ಶಾಂತವಾಗಿರಲು ಪ್ರಯತ್ನಿಸುತ್ತಾನೆ. ಆದರೆ ಆತನ ಗೇಲಿ ತುಂಬಾ ಹೆಚ್ಚಾಗ ತೊಡಗಿದೆ. ಆಗ ವರನು ಇದ್ದಕ್ಕಿದ್ದಂತೆ ತಾಳ್ಮೆ ಕಳೆದುಕೊಂಡು ಸಂಬಂಧಿಯನ್ನು ಹೊಡೆಯುತ್ತಾನೆ. ಅವನನ್ನು ಶಾಂತಗೊಳಿಸಲು ವಧು ಪ್ರಯತ್ನಿಸುತ್ತಾಳೆ. ಆದರೆ ಜಗಳ ವಿಕೋಪಕ್ಕೆ ಹೋಗುತ್ತದೆ. ಅಲ್ಲಿ ಬಂದವರು ಒಮ್ಮೆ ಇದನ್ನು ನೋಡಿ ದಂಗಾಗಿದ್ದಾರೆ.
ಈ ವೈರಲ್ ವಿಡಿಯೊಗೆ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಇದು ನೆಟ್ಟಿಗರಿಂದ ವಿವಿಧ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. “ಒಬ್ಬರು ಸ್ವಾಭಾವಿಕವಾಗಿ ಹೇಗೆ ಈ ರೀತಿ ಪ್ರತಿಕ್ರಿಯಿಸುತ್ತಾರೆ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಅಚ್ಚಾ ಮಾರಾ ಉಸ್ಕೊ ಕಬ್ ಸೆ ಪರೇಶನ್ ಕರ್ ರಾ ಥಾ” ಎಂದು ಬರೆದಿದ್ದಾರೆ. ಕಿರಿಕಿರಿ ಉಂಟುಮಾಡುವ ಸಂಬಂಧಿಗೆ ವರನು ಹಾಗೇ ಮಾಡಬೇಕು ಎಂದು ಅನೇಕರು ವರನಿಗೆ ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ವಯಸ್ಕರ ಸಿನಿಮಾ ನಟಿ ರಿಯಾ ಬಾರ್ಡೆ ಬಂಧನ
ಒಟ್ಟಾರೆಯಾಗಿ, ಈ ವಧು ವರ ವೈರಲ್ ವಿಡಿಯೊ ಕುಟುಂಬ ಸಮಾರಂಭದ ಸಮಯದಲ್ಲಿ ಕೆಲವು ಜನರು ಕಿರಿಕಿರಿ ಮಾಡಿ ಜಗಳ ಮಾಡುವಂತೆ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ. ಅಲ್ಲದೇ ತಮಾಷೆಗೆ ಒಂದು ಮಿತಿಯಲ್ಲಿ ಇರಬೇಕು, ಇಲ್ಲವಾದರೆ ಇದು ಆಘಾತಕಾರಿ ಘಟನೆಗೆ ಕಾರಣವಾಗುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.