Wednesday, 6th November 2024

Viral Video: ಪ್ಯಾರಾಗ್ಲೈಡಿಂಗ್‍, ಸ್ಪೀಡ್ ಫ್ಲೈ ಮಾಡೋ ಮುನ್ನ ಎಚ್ಚರ… ಎಚ್ಚರ! ಈ ಶಾಕಿಂಗ್‌ ವಿಡಿಯೋ ನೋಡಿದ್ರೆ ಮೈ ನಡುಗುತ್ತೆ

Viral Video

ಬ್ರೆಜಿಲ್ : ಬ್ರೆಜಿಲ್‍ನ ಸಾವೊ ಕಾನ್ರಾಡೊದಲ್ಲಿ ಸ್ಕೈಡೈವಿಂಗ್ ತರಬೇತುದಾರ ಜೋಸ್ ಡಿ ಅಲೆಂಕಾರ್ ಲಿಮಾ ಜೂನಿಯರ್ ಸ್ಕೈಡೈವಿಂಗ್ ಮಾಡುವಾಗ ಬಂಡೆಯ ಅಂಚಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇವರಿಗೆ 49 ವರ್ಷ ವಯಸ್ಸಾಗಿತ್ತು. ಪ್ಯಾರಾಗ್ಲೈಡಿಂಗ್‍ಗೆ ಹೋಲುವ ವಾಯು ಕ್ರೀಡೆಯಾದ ಸ್ಪೀಡ್ ಫ್ಲೈ ಮಾಡಲು ಪ್ಯಾರಾಚೂಟ್ ಹಿಡಿದು ಹಾರುವಾಗ ಸಮತೋಲನ ಕಳೆದುಕೊಂಡು  ಕೆಳಕ್ಕೆ  ಬಿದ್ದು ಮೃತಪಟ್ಟಿದ್ದಾರೆ. ಅವರು ಎತ್ತರದಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.  

ವೈರಲ್ ವಿಡಿಯೊದಲ್ಲಿ ಲಿಮಾ ಅವರು ಪ್ಯಾರಾಚೂಟ್ ಹಿಡಿದು ಓಡುತ್ತಿದ್ದಾಗ ಬಂಡೆಯ ಕೆಳಗೆ ಬಿದ್ದಿದ್ದಾರೆ. ಇದನ್ನು ಮಹಿಳೆಯೊಬ್ಬರು ವಿಡಿಯೊ ಮಾಡಿದ್ದಾರೆ. ಈ ಅಪಘಾತದಲ್ಲಿ ಲಿಮಾ ಅವರು  ಸುಮಾರು 820 ಅಡಿ ಕೆಳಗೆ ಬಿದ್ದಿದ್ದಾರೆ ಮತ್ತು ಅಲ್ಲಿದ್ದ ಬಂಡೆಗೆ ಬಡಿದು ಸಾವನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಿಮಾ ಅವರು ಬಂಡೆಗಳ  ಮೇಲೆ ಜಾರಿ ಬಿದ್ದು ಸಾವನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸಿದ್ದಾರೆ ಮತ್ತು ಅಪಘಾತದ ಸಮಯದಲ್ಲಿ ಲಿಮಾ ಬಳಸಿದ ಉಪಕರಣಗಳು  ದೋಷಪೂರಿತವಾಗಿರಬಹುದು ಎಂದು ಅಂದಾಜಿಸಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಸ್‍ಸಿಎಲ್‍ವಿ(Clube Sao Conrado de Voo Livre) , “ಅವರು  ಟೇಕ್ ಆಫ್ ಆಗಲು ರ್ಯಾಂಪ್ ಬಳಸಲಿಲ್ಲ. ಅಲ್ಲದೇ ಅವರು ಟೇಕ್ ಆಫ್ ಮಾಡಲು ಆಯ್ಕೆ ಮಾಡಿದ ಸ್ಥಳವು ಸರಿಯಾಗಿರಲಿಲ್ಲ  ಮತ್ತು  ಅದು ನಿಷೇಧಿಸಿದ ಸ್ಥಳವಾಗಿತ್ತು. ಈ ಘಟನೆಗೆ ಸಿಎಸ್‍ಸಿಎಲ್‍ವಿ ಜವಾಬ್ದಾರರಲ್ಲ “ ಎಂದು ಸಿಎಸ್‍ಸಿಎಲ್‍ವಿ ಹೇಳಿಕೆ ನೀಡಿದೆ.

ಬ್ರೆಜಿಲ್ ಸೇನೆಯ ಪ್ಯಾರಾಚೂಟ್ ಇನ್ಫೆಂಟ್ರಿ ಬ್ರಿಗೇಡ್‍ನಲ್ಲಿ ಪ್ಯಾರಾಟ್ರೂಪರ್ ಆಗಿ ಸೇವೆ ಸಲ್ಲಿಸಿದ ಲಿಮಾ, ಅನುಭವಿ ಸ್ಕೈಡೈವಿಂಗ್ ತರಬೇತುದಾರರಾಗಿದ್ದರು. ಅವರು ಜರ್ಮನಿಯಲ್ಲಿ ವಾಸವಾಗಿದ್ದರು ಹಾಗೂ ಆಗಾಗ  ಬ್ರೆಜಿಲ್‍ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡುತ್ತಿದ್ದರು.  

ಇದನ್ನೂ ಓದಿ:ಅಬ್ಬಾ…ರೈಲಿನಲ್ಲಿ ಇದೆಂಥಾ ಸ್ಟಂಟ್‌! ನೋಡುಗರು ಫುಲ್‌ ಶಾಕ್‌-ವಿಡಿಯೊ ಇದೆ

ಸ್ಕೈಡೈವಿಂಗ್ ಮಾಡುವಾಗ ವ್ಯಕ್ತಿ ಈ ರೀತಿ ಜನರು ಸಾವನಪ್ಪಿದ ಘಟನೆ ಇದೆ ಮೊದಲಲ್ಲ. ಕಳೆದ ತಿಂಗಳು, ಬ್ರೆಜಿಲ್‍ನ ಬೊಯಿಟುವಾದಲ್ಲಿ ಸ್ಕೈಡೈವಿಂಗ್ ಮಾಡುವಾಗ ಚಿಲಿಯ ಮಹಿಳೆಯೊಬ್ಬರು ಪ್ಯಾರಾಚೂಟ್‍ಗಳನ್ನು ಸರಿಯಾಗಿ ನಿಯೋಜಿಸಲು ಸಾಧ್ಯವಾಗದೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.