Saturday, 14th December 2024

Viral Video: ತಾನೇ ಅಡ್ಡಾದಿಡ್ಡಿ ಸ್ಕೂಟಿ ಓಡಿಸಿ ರಸ್ತೆಯಲ್ಲಿ ಬಿದ್ದು ಜಗಳಕ್ಕಿಳಿದ ಯುವತಿ!

Viral Video


ರಸ್ತೆಯಲ್ಲಿ ತುಂಬಾ ಎಚ್ಚರಿಕೆಯಿಂದ ವಾಹನ ಓಡಿಸಬೇಕು ಎಂಬ ಅರಿವಿದ್ದರೂ ಕೂಡ ಕೆಲವರು ಹೋಗುವ ಅವಸರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಸಿಕ್ಕಸಿಕ್ಕ ಕಡೆ ನುಗ್ಗಿಸಿ ಕೊನೆಗೆ ಅಪಘಾತಕ್ಕೀಡಾಗುತ್ತಾರೆ. ಇದರಿಂದ ಕೆಲವರಿಗೆ ಗಂಭೀರ ಅಪಾಯಗಳಾಗಿದ್ದರೆ, ಕೆಲವರು ರಸ್ತೆಯ ನಡುವೆಯಲ್ಲಿ ಜಗಳಕ್ಕಿಳಿದು ಗೊಂದಲವನ್ನು ಉಂಟುಮಾಡುತ್ತಾರೆ. ಇದೀಗ ಅಂತಹದೊಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳು ಮತ್ತು ಬೈಕ್ ಬಿಡುತ್ತಿದ್ದ ವ್ಯಕ್ತಿಯ ನಡುವೆ ಸಿಕ್ಕಾಪಟ್ಟೆ ಜಗಳ ನಡೆದು, ಇದು ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲವನ್ನು ಹುಟ್ಟುಹಾಕಿದೆ.

ಘರ್ ಕಾ ಕಾಲೇಶ್ ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜನಸಂದಣಿ ಇರುವ ರಸ್ತೆಯಲ್ಲಿ ನಡೆದ ಈ ಘಟನೆ ಅತ್ಯಂತ ಗೊಂದಲಮಯವಾಗಿದ್ದರು. ಈ ಘಟನೆ ಕೆಲವರಿಗಂತೂ ಸಿಕ್ಕಾಪಟ್ಟೆ ನಗು ತರಿಸಿದೆ. ಈ ವೈರಲ್ ವಿಡಿಯೊದಲ್ಲಿ, ಯುವತಿಯೊಬ್ಬಳು ಸ್ಕೂಟಿಯನ್ನು ಸರಿಯಾಗಿ ಓಡಿಸಲಾಗದೆ ಅಡ್ಡಾದಿಡ್ಡಿಯಾಗಿ ಓಡಿಸಿ ಕೊನೆಗೆ ಸ್ಕೂಟಿಯನ್ನು ನಿಯಂತ್ರಿಸಲು ಆಗದೆ ಹಠಾತ್ ತಿರುವು ತೆಗೆದುಕೊಂಡು ರಸ್ತೆಯ ಮೇಲೆ ಬಿದ್ದಿದ್ದಾಳೆ.

ಆರಂಭದಲ್ಲಿ ಅಪಘಾತದಂತೆ ಕಂಡ ಈ ಘಟನೆಯು ನಂತರ ವಾಗ್ವಾದಕ್ಕೆ ಕಾರಣವಾಗಿದೆ. ಏಕೆಂದರೆ ಆಘಾತಕ್ಕೊಳಗಾದ ಮಹಿಳೆ ತನ್ನ ಹಿಂದೆ ಬೈಕ್‍ನಲ್ಲಿ ಬರುತ್ತಿದ್ದ ವ್ಯಕ್ತಿಯ ವಿರುದ್ಧ ಆರೋಪ ಮಾಡಿ ಜಗಳಕ್ಕೀಳಿದಿದ್ದಾಳೆ. ಹಾಗೇ ಕೆಲವರು ಈ ಘಟನೆಯನ್ನು ಸೆರೆಹಿಡಿದಿದ್ದಾರೆ. ಇದರಲ್ಲಿ ಆ ವ್ಯಕ್ತಿ ಘಟನೆಯ ಬಗ್ಗೆ ಶಾಂತವಾಗಿ ವಿವರಿಸುತ್ತಿದ್ದರೂ, ಮಹಿಳೆ ಮಾತ್ರ ಕೋಪದಿಂದ ಅವನ ಬೈಕಿನ ಕೀಯನ್ನು ಕಸಿದುಕೊಂಡಿದ್ದಾಳೆ. ಆದರೆ ಅಲ್ಲಿ ನೆರೆದಿದ್ದ ಜನರು ಮಾತ್ರ ಅವಳ ಪರವಾಗಿ ನಿಂತು, ಬೈಕ್ ಸವಾರನನ್ನು ಅವಮಾನಿಸಿದ್ದಾರೆ.

ಇದನ್ನೂ ಓದಿ:ತಂದೆಯನ್ನು ಕೊಲ್ಲುವುದಾಗಿ ಬೆದರಿಸಿ ವಿದ್ಯಾರ್ಥಿನಿ ಮೇಲೆ 11 ಬಾಲಕರಿಂದ ಅತ್ಯಾಚಾರ

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ತಪ್ಪು ಮಾಡದ ಬೈಕ್ ಸವಾರನನ್ನು ದೂಷಿಸಿದ್ದಕ್ಕಾಗಿ ಕೆಲವರು ಮಹಿಳೆ ಮತ್ತು ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ರಸ್ತೆ ಸುರಕ್ಷತೆ ಮತ್ತು ಶಿಷ್ಟಾಚಾರದ ಬಗ್ಗೆ ಜಾಗೃತಿ ಮುಖ್ಯ ಎಂದು ಸಲಹೆ ನೀಡಿದ್ದಾರೆ. ಕೆಲವು ಜನರು ಬೈಕ್ ಸವಾರನನ್ನು ಬೆಂಬಲಿಸಿ ಮಾತನಾಡಿದ್ದಾರೆ ಆತ ಶಾಂತಚಿತ್ತದಿಂದ ಇದ್ದು, ಆಕೆ ಜಗಳ ಮಾಡುತ್ತಿದ್ದರೂ ಕೋಪಗೊಳ್ಳದೆ ತಾಳ್ಮೆಯಿಂದ ಇರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.